ಕರ್ನಾಟಕ

karnataka

By

Published : Feb 19, 2019, 1:46 PM IST

ETV Bharat / sitara

ಫೆ. 22ಕ್ಕೆ 'ಚಂಬಲ್' ರಿಲೀಸ್​​: ಚಿತ್ರತಂಡಕ್ಕೆ 'ಪೊಗರು' ಹುಡುಗ ವಿಶ್​​

ನೀನಾಸಂ ಸತೀಶ್ ಅಭಿನಯದ 'ಚಂಬಲ್' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದ್ದು ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಚಂಬಲ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸತೀಶ್ ನೀನಾಸಂ, ಧ್ರುವಾಸರ್ಜಾ

ನೀನಾಸಂ ಸತೀಶ್ ಪಾಲಿಗೆ 'ಚಂಬಲ್' ವಿಶೇಷವಾದ ಸಿನಿಮಾ ಎನಿಸಿದೆ. ಈ ಸಿನಿಮಾದಲ್ಲಿ ಸತೀಶ್ ಹಿಂದೆಂದೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದ್ದು, ಪೊಗರು ಹುಡುಗ ಧ್ರುವಸರ್ಜಾ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. 'ಇದೇ 22 ರಂದು ಚಂಬಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ನನ್ನ ಸ್ನೇಹಿತ ಸತೀಶ್ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇಡೀ ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್​​. ಎಲ್ಲರೂ ಸಿನಿಮಾ ನೋಡಿ ಆಶೀರ್ವಾದ ಮಾಡಿ' ಎಂದು ಧ್ರುವ ಮನವಿ ಮಾಡಿದ್ದಾರೆ.

ಚಂಬಲ್​​​​​​ ಚಿತ್ರಕ್ಕೆ ಧ್ರುವಸರ್ಜಾ ವಿಶ್​​

ಇದುವರೆಗೂ ಹಳ್ಳಿ ಸೊಗಡಿನ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದ ಸತೀಶ್ ಇದೇ ಮೊದಲ ಬಾರಿಗೆ ಖಡಕ್ ಐಎಎಸ್ ಅಧಿಕಾರಿಯಾಗಿ ನಟಿಸಿರುವುದು ಸಿನಿಮಾದ ವಿಶೇಷ. ಇದರಲ್ಲಿ ಅವರ ಮ್ಯಾನರಿಸಂ ಸಂಪೂರ್ಣ ಡಿಫರೆಂಟ್ ಆಗಿದೆ ಎನ್ನಲಾಗಿದೆ. 'ಸವಾರಿ' ಹಾಗೂ 'ಪೃಥ್ವಿ' ಚಿತ್ರಗಳನ್ನು ನಿರ್ದೇಶಿಸಿದ್ದ ಜೇಕಬ್ ವರ್ಗೀಸ್ 'ಚಂಬಲ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details