ಕರ್ನಾಟಕ

karnataka

ETV Bharat / sitara

ಮೋದಿ ಬಯೋಪಿಕ್ ಬಿಡುಗಡೆ ಮುಂದಕ್ಕೆ...! ಇಲ್ಲಿದೆ ಹೊಸ ದಿನಾಂಕ - ಬಿಡುಗಡೆ

ಮೇಲ್ವಿಚಾರಣಾ ಸಮಿತಿ ಚಿತ್ರಕ್ಕೆ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕೆಲ ಬದಲಾವಣೆ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡಲು ಸೂಚಿಸಿದೆ ಎನ್ನಲಾಗಿದೆ.

ಮೋದಿ ಬಯೋಪಿಕ್

By

Published : Apr 4, 2019, 9:35 AM IST

ನವದೆಹಲಿ: ಪ್ರಧಾನಿ ಮೋದಿ ಬಯೋಪಿಕ್ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದ್ದು, ಹೀಗಾಗಿ ಈ ವಾರ ಥಿಯೇಟರ್​ನಲ್ಲಿ ಮೋದಿ ಜೀವನಕಥೆ ನೋಡಲು ಸಾಧ್ಯವಿಲ್ಲ.

ಶೂಟಿಂಗ್ ಕಂಪ್ಲೀಟ್ ಆಗುತ್ತಿದ್ದಂತೆ ಎಪ್ರಿಲ್ 12ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಟ್ರೇಲರ್​ನಲ್ಲಿ ಎಪ್ರಿಲ್ 5ಕ್ಕೆ ಎಂದು ಅಧಿಕೃತಗೊಳಿಸಲಾಗಿತ್ತು. ಸದ್ಯದ ಮಾಹಿತಿಯ ಪ್ರಕಾರ ಮೋದಿ ಬಯೋಪಿಕ್ ಈ ಮೊದಲಿನ ದಿನಾಂಕ ಅಂದರೆ ಎಪ್ರಿಲ್ 12ಕ್ಕೆ ರಿಲೀಸ್ ಆಗಲಿದೆ.

ಲೋಕಸಭಾ ಚುನಾವಣೆ, ನೀತಿ ಸಂಹಿತೆ ಉಲ್ಲಂಘನೆ ಹೀಗೆ ಈ ಸಿನಿಮಾ ಹಲವು ವಿಚಾರಗಳಿಂದ ಸುದ್ದಿ ಮಾಡುತ್ತಲೇ ಇದೆ. ಚುನಾವಣೆಯ ಬಳಿಕ ಈ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಆಯೋಗದ ಮುಂದೆ ಮನವಿ ಮಾಡಿತ್ತು. ಸೆನ್ಸಾರ್ ಮಂಡಳಿ ಇದನ್ನು ನಿರ್ಧರಿಸಲಿದೆ ಎಂದು ಆಯೋಗ ಮನವಿಗೆ ಪ್ರತಿಕ್ರಿಯೆ ನೀಡಿತ್ತು.

ಮೇಲ್ವಿಚರಣಾ ಸಮಿತಿ, ಚಿತ್ರಕ್ಕೆ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕೆಲ ಬದಲಾವಣೆ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡಲು ಸೂಚಿಸಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಮೋದಿ ಬಯೋಪಿಕ್​ಗಾಗಿ ಮೀಸಲಿಟ್ಟ ಚಿತ್ರಮಂದಿರಗಳಲ್ಲಿ ಸದ್ಯ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.

ಮೋದಿ ಬಯೋಪಿಕ್ ಚಿತ್ರವನ್ನು ಒಮಂಗ್ ಕುಮಾರ್ ನಿರ್ದೇಶಿಸಿದ್ದು ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details