ಕರ್ನಾಟಕ

karnataka

ETV Bharat / sitara

ಪ್ರಣಬ್​​ ಮುಖರ್ಜಿ ಸಾವಿಗೆ ಸಂತಾಪ ಸೂಚಿಸಿದ ಪ್ರಿಯಾಂಕಾ ಚೋಪ್ರಾ - ಪ್ರಿಯಾಂಕಾ ಚೋಪ್ರಾ

ಮಾಜಿ ರಾಷ್ಟ್ರಪತಿ ಪ್ರಣಬ್​​ ಮುಖರ್ಜಿ ಸಾವಿಗೆ ಸಂತಾಪ ಸೂಚಿಸಿರುವ ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ, ನಿಮ್ಮ ಸಾಧನೆ ನಾವೆಂದೂ ಮರೆಯುವಂತಿಲ್ಲ ಎಂದು ಟ್ವೀಟ್​​ ಮಾಡಿದ್ದಾರೆ.

PeeCee condoles former President Pranab Mukherjee's demise
ಪ್ರಣಬ್​​ ಮುಖರ್ಜಿ ಸಾವಿಗೆ ಸಂತಾಪ ಸೂಚಿಸಿದ ಪ್ರಿಯಾಂಕಾ ಚೋಪ್ರಾ

By

Published : Sep 1, 2020, 6:59 PM IST

ನಿನ್ನೆ ವಿಧಿವಶರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ ಮಿಸ್​​ ವರ್ಲ್ಡ್​​​, ಬಾಲಿವುಡ್ ನಟಿ​​ ಪ್ರಿಯಾಂಕಾ ಚೋಪ್ರಾ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್​​ನಲ್ಲಿ ಪ್ರಣಬ್​​ ಮುಖರ್ಜಿ ಜೊತೆಗಿನ ಫೋಟೋ ಒಂದನ್ನು ಶೇರ್​​ ಮಾಡಿದ್ದಾರೆ. ಈ ಫೋಟೋ ದಲ್ಲಿ ಪ್ರಿಯಾಂಕಾ ಚೋಪ್ರಾ 2016ರಲ್ಲಿ ಪ್ರಣಬ್​​ ಮುಖರ್ಜಿಯವರಿಂದ ಪ್ರಿಯಾಂಕ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ.

ಇನ್ನು ಪ್ರಣಬ್​ ಕಾರ್ಯದ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ನಮ್ಮ ದೇಶದ ಅಭಿವೃದ್ಧಿಗೆ ನೀವು ಶ್ರಮಿಸಿರುವುದನ್ನು ನಾವೆಂದೂ ಮರೆಯುವಂತಿಲ್ಲ. ನಿಮ್ಮ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನಿಮ್ಮ ಕುಡುಂಬಕ್ಕೆ ಸಿಗಲಿ ಎಂದು ಟ್ವೀಟ್​​ ಮಾಡಿದ್ದಾರೆ.

ABOUT THE AUTHOR

...view details