ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​ ಸೀಸನ್‌-7: ಶಿವರಾಜ್​ ಕೆ.ಆರ್​ ಪೇಟೆ, ಸರಿಗಮಪ ಹನುಮಂತ ಬರ್ತಾರಾ? - ಬಿಗ್​ ಬಾಸ್​ ಸೀಸನ್​ 7

ಈ ಬಾರಿ ಬಿಗ್​ ಬಾಸ್​-7 ನಲ್ಲಿ ಜನಸಾಮಾನ್ಯರಿಗೆ ಅವಕಾಶ ಇರೋದಿಲ್ಲ. ಮೊದಲ ಸೀಸನ್ ರೀತಿ 17 ಜನ ಸಿನಿಮಾ ಹಾಗೂ ವಿವಿಧ ಕ್ಷೇತ್ರಗಳ ಸ್ಪರ್ಧಿಗಳಿರ್ತಾರೆ ಎಂದು ಪರಮೇಶ್ವರ್​ ಗುಂಡ್ಕಲ್​​​ ತಿಳಿಸಿದ್ದಾರೆ. ರಿಯಾಲಿಟಿ ಶೋ ಅಕ್ಟೋಬರ್ 13ರಿಂದ ಆರಂಭವಾಗಲಿದ್ದು, ಸಾಕಷ್ಟು ಅಚ್ಚರಿಯ ಟ್ವಿಸ್ಟ್​​ನೊಂದಿಗೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ರು

ಬಿಗ್​ ಬಾಸ್ ಸೀಸನ್​ 7

By

Published : Oct 10, 2019, 9:13 PM IST

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್‌ಬಾಸ್ ಆರು ಸೀಸನ್​​ಗಳಲ್ಲಿ ವಿಭಿನ್ನ ಮ್ಯಾನರಿಸಂ ಇರುವ ಕಂಟೆಸ್ಟೆಂಟ್ಸ್‌ ಬಂದು ಹೋಗಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್-7 ಶುರು ಆಗೋದಕ್ಕೆ ದಿನಗಣನೆ ಆರಂಭವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಎಂಟರ್‌ಟೈನ್‌ಮೆಂಟ್ ಕ್ಲಸ್ಟರ್​​ ಬ್ಯುಸಿನೆಸ್‌ ಹೆಡ್ ಪರಮೇಶ್ ಗುಂಡ್ಕಲ್ ಹಲವಾರು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಹರಿದಾಡುತ್ತಿರುವ ಊಹಾಪೋಹಗಳಂತೆ ಬಿಗ್​ ಬಾಸ್​ಗೆ ಶಿವರಾಜ್ ಕೆ.ಆರ್.ಪೇಟೆ, ನಟಿ ರಾಗಿಣಿ, ವಿಜಯಲಕ್ಷ್ಮಿ, ಪಾರುಲ್ ಯಾದವ್, ಕುರಿ ಪ್ರತಾಪ್, ಗಾಯಕ ಹನುಮಂತ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿದೆ. ಸದ್ಯ ಬಿಗ್ ಬಾಸ್ ಸೀಸನ್ 7 ಪ್ರೋಮೋಗಳು ವಿಭಿನ್ನವಾಗಿ ಮೂಡಿ ಬಂದಿದ್ದು ಈ ಸೀಸನ್ ಹಲವಾರು ವಿಶೇಷತೆಗಳಿಂದ ಕೂಡಿರುತ್ತೆ ಎನ್ನಲಾಗಿದೆ.

ಸುದೀಪ್ ಯಾಕೆ ಬಿಗ್ ಬಾಸ್ ಸೀಸನ್ 7ರಲ್ಲೂ ಮುಂದುವರೆಯುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಪರಮೇಶ್ ಗುಂಡ್ಕಲ್, ಏಳು ಕಾರಣಗಳನ್ನ ಕೊಟ್ಟಿದ್ದಾರೆ. ಹಾಗೆಯೇ ಸುದೀಪ್​ಗೂ ಕೂಡ ಬಿಗ್ ಬಾಸ್ ಶೋ, ಸಿನಿಮಾಗಿಂತ ಹೆಚ್ಚಾಗಿ ಖುಷಿ‌ ಕೊಟ್ಟಿದೆಯಂತೆ.

ಬಿಗ್ ಬಾಸ್ ಸೀಸನ್ 7ರ ಹೈಲೆಟ್ಸ್ ಅಂದ್ರೆ, ಬೆಂಗಳೂರು, ಮೈಸೂರು, ಬೆಳಗಾವಿ, ಉಡುಪಿಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾರ್ಯಕ್ರಮದ ಭರ್ಜರಿ ಓಪನಿಂಗ್​ ನೋಡಬಹುದಾಗಿದೆ.

ABOUT THE AUTHOR

...view details