ಈ ಬಾರಿ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿಗೆ ಐದು ತಾರೆಯರ ಹೆಸರುಗಳು ನಾಮಿನೇಷನ್ ಆಗಿವೆ. ಹಿರಿಯ ನಟ ಅನಂತ್ ನಾಗ್, ಸತೀಶ್ ನೀನಾಸಂ, ಶರಣ್, ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರುಗಳು ನಾಮ ನಿರ್ದೇಶನಗೊಂಡಿವೆ. ಈ ಮೇಲಿನ ತಾರೆಯರಲ್ಲಿ ಅತ್ಯುತ್ತಮ ನಟ ಆಯ್ಕೆ ಜವಾಬ್ದಾರಿ ಅಭಿಮಾನಿಗಳಿಗೆ ವಹಿಸಲಾಗಿದೆ. ಎಲ್ಲರೂ ವೋಟ್ ಮಾಡಿ ಎಂದು ಪ್ರಶಸ್ತಿ ಆಯೋಜಕರು ಕೇಳಿಕೊಂಡಿದ್ದಾರೆ.
2019ರ ಕನ್ನಡದ ಅತ್ಯುತ್ತಮ ನಟ ಯಾರು ? ನೀವೂ ವೋಟ್ ಮಾಡಿ - ಸೈಮಾ
2019ರ ಈ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ) ಪ್ರಧಾನ ಕಾರ್ಯಕ್ರಮ ಕತಾರ್ನ ದುಹಾನಲ್ಲಿ ಆಯೋಜಿಸಲಾಗಿದೆ. ಆಗಸ್ಟ್ 15 ಹಾಗೂ 16 ರಂದು ನಡೆಯಲಿರುವ ಈ ಗ್ರ್ಯಾಂಡ್ ಇವೆಂಟ್ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಹಲವು ವಿಭಾಗಗಳ ಪ್ರಶಸ್ತಿಗೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ.
ಸೈಮಾ
ಇನ್ನು ಸೌಥ್ನ ಎಲ್ಲ ಸಿನಿರಂಗಗಳು ಈ ಪ್ರಶಸ್ತಿಯಲ್ಲಿ ಪಾಲ್ಗೊಳ್ಳುತ್ತವೆ. ಪರಭಾಷೆಯಲ್ಲಿಯೂ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಕಳೆದ ಬಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಈ ಬಾರಿ ಈ ಸ್ಥಾನ ಯಾರು ಪಡೆಯಲಿದ್ದಾರೆ ಎಂಬುದನ್ನು ತಿಳಿಯಲು ಮುಂದಿನ ತಿಂಗಳವರೆಗೆ ಕಾಯಲೇಬೇಕು.