ಕರ್ನಾಟಕ

karnataka

ETV Bharat / sitara

ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾನೆ ಪೈಲ್ವಾನ್ : ಕಿಚ್ಚನ ಅಭಿಮಾನಿಗಳಿಗೆ ಖುಷಿಯೋ ಖುಷಿ!​​​ - pailwan movie coming soon in small screen

ಜೀ ಕನ್ನಡ ವಾಹಿನಿಯಲ್ಲಿ ಪೈಲ್ವಾನ್ ಸಿನಿಮಾ ಅತೀ ಶೀಘ್ರದಲ್ಲಿ ಪ್ರಸಾರವಾಗಲಿರುವುದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬಹಳಷ್ಟು ಸಂತಸ ನೀಡಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕ ಕಾಲಕ್ಕೆ ಪೈಲ್ವಾನ್ ಸಿನಿಮಾ ಬಿಡುಗಡೆ ಮಾಡಿ ಸುದ್ದಿ ಮಾಡಿತ್ತು.

pailwan movie coming soon in small screen
ಪೈಲ್ವಾನ್

By

Published : Dec 23, 2019, 5:36 PM IST

ಅಭಿನಯ ಚಕ್ರವರ್ತಿ ಸುದೀಪ್ ಕುಸ್ತಿಪಟುವಾಗಿ ಕಾಣಿಸಿಕೊಂಡಿರುವ ಪೈಲ್ವಾನ್ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು‌. ವಿಭಿನ್ನ ಕಥಾ ಶೈಲಿಯ ಮೂಲಕ ಪ್ರೇಕ್ಷಕರ ಮನ ಸೆಳೆದಿರುವ ಪೈಲ್ವಾನ್ ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಜೀ ಕನ್ನಡ ವಾಹಿನಿಯಲ್ಲಿ ಪೈಲ್ವಾನ್ ಸಿನಿಮಾ ಅತೀ ಶೀಘ್ರದಲ್ಲಿ ಪ್ರಸಾರವಾಗಲಿರುವುದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬಹಳಷ್ಟು ಸಂತಸ ನೀಡಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕ ಕಾಲಕ್ಕೆ ಪೈಲ್ವಾನ್ ಸಿನಿಮಾ ಬಿಡುಗಡೆ ಮಾಡಿ ಸುದ್ದಿ ಮಾಡಿತ್ತು.

ಸಿನಿಮಾದಲ್ಲಿ ಕಿಚ್ಚ ಸುದೀಪ್​​ಗೆ ಜೋಡಿಯಾಗಿ ಮುದ್ದು ಚೆಲುವೆ ಆಕಾಂಕ್ಷಾ ಸಿಂಗ್ ಅಭಿನಯಿಸಿದ್ರು. ಮಂಗಳೂರಿನ ಚೆಲುವ, ಬಾಲಿವುಡ್​ನ ಹೆಸರಾಂತ ನಟ ಸುನೀಲ್ ಶೆಟ್ಟಿ ಕೂಡಾ ಇದೇ ಮೊದಲ ಬಾರಿಗೆ ಪೈಲ್ವಾನ್​ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಬಾಕ್ಸ್ ಆಫೀಸ್​ನಲ್ಲಿ ಚಿಂದಿ ಉಡಾಯಿಸಿದ್ದ ಪೈಲ್ವಾನ್ ಸಿನಿಮಾ ಇದೀಗ ಕಿರುತೆರೆಯಲ್ಲಿ ಬರಲಿದೆ. ಈಗಾಗಲೇ ವಾಹಿನಿಯಲ್ಲಿ ಈ ಚಿತ್ರದ ಫ್ರೋಮೋ ಹರಿದಾಡುತ್ತಿದ್ದು ಕಿರುತೆರೆಯಲ್ಲಿ ಪೈಲ್ವಾನ್ ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ‌.

ABOUT THE AUTHOR

...view details