ಟ್ರೈಲರ್ ನಿಂದಲೇ ಸ್ಯಾಂಡಲ್ ವುಡ್ನಲ್ಲಿ ಸೌಂಡ್ ಮಾಡುತ್ತಿರೋ ಸಿನಿಮಾ ಒಪ್ಪಂದ. ಬಹುಭಾಷಾ ನಟ ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಒಪ್ಪಂದ ಚಿತ್ರದ ಬಿಡುಗಡೆ ಡೇಟ್ ಅನೌನ್ಸ್ ಆಗಿದೆ. ಟ್ರಯಾಂಗಲ್ ಲವ್ ಸ್ಟೋರಿ ಕಥೆ ಆಧರಿಸಿರೋ ಒಪ್ಪಂದ ಸಿನಿಮಾ ಇದೇ ವಾರ ಪ್ರೇಕ್ಷಕರ ಮುಂದೆ ಬರ್ತಾ ಇದೆ.
ಅರ್ಜುನ್ ಸರ್ಜಾ - ರಾಧಿಕಾ ಕುಮಾರಸ್ವಾಮಿ ಅಭಿನಯದ ಒಪ್ಪಂದ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್! - ಅರ್ಜುನ್ ಸರ್ಜಾ ಹಾಗು ರಾಧಿಕಾ ಕುಮಾರಸ್ವಾಮಿ ಅಭಿನಯದ ಒಪ್ಪಂದ ಸಿನಿಮಾ ಬಿಡುಗಡೆ
ಕನ್ನಡ, ತೆಲುಗು, ತಮಿಳು ಹಾಗು ಹಿಂದಿ ಭಾಷೆಯಲ್ಲಿ ಮೂಡಿ ಬರ್ತೀರೋ ಒಪ್ಪಂದ ಸಿನಿಮಾವನ್ನ, ಸಮೀರ್ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ ಅಲ್ಲದೇ ಅಮೀರ್ ಖಾನ್ ಸಹೋದರ ಫೈಸಲ್ ಖಾನ್, ಸೋನಿ ಚರಿಶ್ಟಾ, ವಿಶ್ವನಾಥ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ. ಬಾಹರ್ ಫಿಲಂಸ್ ಮೂಲಕ ವಿತರಕ, ಭಾಷಾ ಈ ಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.