ಜನಪ್ರಿಯ ನಿರ್ದೇಶಕ ಹಾಗೂ ಛಾಯಾಗ್ರಾಹಕರಾಗಿರುವ, ಕನ್ನಡ ಹಾಗೂ ಮಲಯಾಳಂ ಭಾಷೆ ಸೇರಿದಂತೆ 118 ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸ್ಟೈಲಿಶ್ ದಿನೇಶ್ ಬಾಬು ಲಾಕ್ ಡೌನ್ ಮುಗಿಯುವ ಹೊತ್ತಿಗೆ ಒಂದು ಯೋಜನೆ ಸಿದ್ದಪಡಿಸಿದ್ದಾರೆ. ಅದೇ ಆನ್ಲೈನ್ ಕೋಚಿಂಗ್.
ಜೂನ್ ಮೊದಲ ವಾರದಿಂದ ದಿನೇಶ್ ಬಾಬು ಅವರು ಸೋಮವಾರದಿಂದ ಗುರುವಾರ ಸಂಜೆ 7.30ರಿಂದ 9.30ರ ತನಕ ನಿರ್ದೇಶನ, ಕಥೆ, ಚಿತ್ರಕಥೆ ಸೇರಿದಂತೆ ಹಲವಾರು ವಿಭಾಗಳಲ್ಲಿ ಪಾಠ ಮಾಡಲಿದ್ದಾರೆ.
ದಿನೇಶ್ ಬಾಬು ಆನ್ಲೈನ್ ಕೋಚಿಂಗ್ 64 ಗಂಟೆಗಳ ಕ್ಲಾಸಿಗೆ ಅವರು ಫಿಕ್ಸ್ ಮಾಡಿರುವುದು 30,000 ರೂಪಾಯಿಗಳು. ಇದನ್ನು ಎರಡು ಕಂತುಗಳಲ್ಲಿ ನೀಡಬಹುದು. ಪಾಠ ಇಂಗ್ಲಿಷ್ ಭಾಷೆಯಲ್ಲಿ ಇರಲಿದೆ. ಇಚ್ಛೆ ಇರುವವರು ದಿನೇಶ್ ಬಾಬು ಸಿದ್ಧಪಡಿಸಿರುವ ಅಪ್ಲಿಕೇಷನ್ ತುಂಬಿ ಕಳುಹಿಸಬೇಕು.
ದಿನೇಶ್ ಬಾಬು ಆನ್ಲೈನ್ ಕೋಚಿಂಗ್ ಅವರು 15 ವಿಭಾಗಗಳಲ್ಲಿ ಪಾಠ ಮಾಡಲಿದ್ದಾರೆ. ಅದರಲ್ಲಿ ಸಿನಿಮಾ ಮಾರ್ಕೆಟಿಂಗ್, ಪ್ರಚಾರ ಸಹ ಇರಲಿದೆ. ಇದು ಕ್ಲಾಸ್ ರೂಂ ಅಲ್ಲ, ನನ್ನ ವೃತ್ತಿ ಜೀವನದ 38 ವರ್ಷಗಳಲ್ಲಿ ಆದ ಅನುಭವವನ್ನು ಹಂಚಿಕೊಳ್ಳಲಿದ್ದೇನೆ ಎಂದು ನಿರ್ದೇಶಕ ಹಾಗೂ ಛಾಯಾಗ್ರಾಹಕ ದಿನೇಶ್ ಬಾಬು ಹೇಳಿದ್ದಾರೆ.