ಕರ್ನಾಟಕ

karnataka

ETV Bharat / sitara

ಕೆಜಿಎಫ್ 2 ಚಿತ್ರದಲ್ಲಿ ನೋರಾ ಫತೇಹಿ ಡ್ಯಾನ್ಸ್? - ಕೆಜಿಎಫ್ 2 ಚಿತ್ರ

ಕೆಜಿಎಫ್ 2ನ ಹಾಡಿಗೊಂದು ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ನಿಜಕ್ಕೂ ಕೆಜಿಎಫ್ 2 ಚಿತ್ರದ ಹಾಡಿನಲ್ಲಿ ನೋರಾ ಫತೇಹಿ ನಟಿಸಿದ್ದಾರಾ ಅಥವಾ ಇದೊಂದು ಗಾಳಿಸುದ್ದಿಯಾ ಎಂಬುದನ್ನು ಚಿತ್ರ ತಂಡದವರು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

nora patehi
ನೋರಾ ಫತೇಹಿ

By

Published : Apr 28, 2021, 2:03 PM IST

ಕೆಜಿಎಫ್ 2 ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದ ಬಳಿಕ ಚಿತ್ರ ತಂಡದಿಂದ ಚಿತ್ರದ ಬಗ್ಗೆ ಯಾವುದೇ ಅಪ್‍ಡೇಟ್‍ಗಳು ಈವರೆಗೂ ಸಿಕ್ಕಿಲ್ಲ. ಆದರೆ, ಚಿತ್ರದ ವಿಷಯವಾಗಿ ಒಂದಿಲ್ಲೊಂದು ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಹೊಸ ಸುದ್ದಿಯ ಪ್ರಕಾರ, ಐಟಂ ಡ್ಯಾನ್ಸ್​​​​​ಗಳಿಗೆ ಫೇಮಸ್ ಆಗಿರುವ ನೋರಾ ಫತೇಹಿ ಚಿತ್ರದ ಸ್ಪೆಷಲ್ ಹಾಡಿಗೊಂದು ಹೆಜ್ಜೆ ಹಾಕಿದ್ದಾರೆನ್ನುವ ವಿಚಾರ ಹರಿದಾಡುತ್ತಿದೆ.

ಕೆಜಿಎಫ್ 1 ಚಿತ್ರದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು ...' ಹಾಡಿಗೆ ಯಶ್ ಜತೆಗೆ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು ನೆನಪಿರಬಹುದು. ಕೊನೆಗೆ ಚಿತ್ರವು ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಬಂದಾಗ, ಮೌನಿ ರಾಯ್ ಅವರನ್ನು ಕರೆಸಿ ಐಟಂ ಡ್ಯಾನ್ಸ್ ಮಾಡಿಸಲಾಯಿತು. ಈ ಹಾಡಿನಲ್ಲಿ ಯಶ್ ಸಹ ಕಾಣಿಸಿಕೊಂಡಿದ್ದರು. ಇದೀಗ ಕೆಜಿಎಫ್ 2ನಲ್ಲಿ ಸಹ ಒಂದು ವಿಶೇಷ ಹಾಡಿದ್ದು, ಈ ಹಾಡಿಗೆ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಿಂದ ಬಂದಿದೆ.

ಫೆಬ್ರವರಿಯಲ್ಲೇ ಈ ಹಾಡಿನ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಈ ಹಾಡಿಗಾಗಿ ಹೈದರಾಬಾದ್‍ನಲ್ಲಿ ವಿಶೇಷ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್​ಗೆ ಕೊರೊನಾ

ನಿಜಕ್ಕೂ ಕೆಜಿಎಫ್ 2 ಚಿತ್ರದ ಹಾಡಿನಲ್ಲಿ ನೋರಾ ಫತೇಹಿ ನಟಿಸಿದ್ದಾರಾ ಅಥವಾ ಇದೊಂದು ಗಾಳಿಸುದ್ದಿಯಾ ಎಂಬುದನ್ನು ಚಿತ್ರತಂಡದವರು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ. ಸದ್ಯಕ್ಕಂತೂ ಚಿತ್ರ ತಂಡದವರು ಯಾವುದೇ ವಿಷಯವನ್ನು ಸಹ ಬಹಿರಂಗಗೊಳಿಸಿಲ್ಲ.

ABOUT THE AUTHOR

...view details