ಕರ್ನಾಟಕ

karnataka

ETV Bharat / sitara

ಸಾಯಿ ಪಲ್ಲವಿ ಬಸ್​​​​​​​​​​ಸ್ಟಾಪ್​​​​ನಲ್ಲಿ ಒಬ್ಬರೇ ಕುಳಿತಿದ್ರೂ ಯಾರೂ ಪತ್ತೆ ಹಚ್ಚಲಿಲ್ಲವಂತೆ! - ಎನ್​​​​​ಜಿಕೆ

ವೇಣು ಉಡುಗುಲ ನಿರ್ದೇಶನದ 'ವಿರಾಟ ಪರ್ವಂ' ಸಿನಿಮಾ ಶೂಟಿಂಗ್ ವಾರಂಗಲ್​​ನಲ್ಲಿ ನಡೆಯುತ್ತಿದೆ. ಸಾಯಿ ಪಲ್ಲವಿ ಬಸ್​​​​ಗಾಗಿ ಕಾಯುವ ದೃಶ್ಯವನ್ನು ಯಾರಿಗೂ ತಿಳಿಯದಂತೆ ಚಿತ್ರೀಕರಿಸಿಕೊಳ್ಳಲಾಗಿದೆ. ಆದರೆ ಸಾಯಿ ಪಲ್ಲವಿ ಬಸ್​​​​​ಸ್ಟ್ಯಾಂಡ್​​​​ನಲ್ಲಿ ಕುಳಿತಿದ್ದರೂ ಆಕೆಯನ್ನು ಯಾರೂ ಕಂಡುಹಿಡಿದಿಲ್ಲ.

ಸಾಯಿ ಪಲ್ಲವಿ

By

Published : Sep 8, 2019, 1:13 PM IST

ಸಾಯಿ ಪಲ್ಲವಿ ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದ ಭರವಸೆಯ ನಟಿ. ತಮಿಳಿನ 'ಎನ್​​​​​ಜಿಕೆ' ನಂತರ ಸದ್ಯ ತೆಲುಗಿನ 'ವಿರಾಟ ಪರ್ವಂ' ಸೇರಿ ಕೆಲವೊಂದು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ ಇದ್ದಾರೆ.

ನಟಿಯರು ಯಾವುದಾದರೂ ಕಾರ್ಯಕ್ರಮಕ್ಕೆ ಬಂದರೆ, ಕುಟುಂಬದೊಂದಿಗೆ ವೈಯಕ್ತಿಕ ಸಮಾರಂಭಗಳಿಗೆ ಹೋದರೆ ಸೆಲ್ಫಿ, ಆಟೋಗ್ರಾಫ್​​​ಗಾಗಿ ಅಭಿಮಾನಿಗಳು ಮುಗಿಬೀಳುವುದು ಸಾಮಾನ್ಯ. ಆದರೆ ಸಾಯಿಪಲ್ಲವಿ ಬಸ್​​​​ ಸ್ಟಾಪ್​​​​ನಲ್ಲಿ ಒಬ್ಬರೇ ಕುಳಿತಿದ್ದರೂ ಕೂಡಾ ಯಾರೂ ಅವರನ್ನು ಕಂಡುಹಿಡಿಯಲಿಲ್ಲವಂತೆ. ವೇಣು ಉಡುಗುಲ ನಿರ್ದೇಶನದಲ್ಲಿ ಸಾಯಿ ಪಲ್ಲವಿ ಹಾಗೂ ರಾಣಾ ದಗ್ಗುಬಾಟಿ ಜೊತೆಯಾಗಿ ನಟಿಸುತ್ತಿರುವ 'ವಿರಾಟ ಪರ್ವಂ' ಸಿನಿಮಾ ಶೂಟಿಂಗ್ ವಾರಂಗಲ್​​​ನಲ್ಲಿ ನಡೆಯುತ್ತಿದೆ. ಅಲ್ಲಿನ ಬಸ್​​ಸ್ಟ್ಯಾಂಡ್​ ಒಂದರಲ್ಲಿ ಸಾಯಿ ಪಲ್ಲವಿ ಬಸ್​​​ಗಾಗಿ ಕಾಯುತ್ತಾ ಕುಳಿತಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರತಂಡ ಯಾರಿಗೂ ತಿಳಿಯದಂತೆ ಬಸ್​​​​​ಸ್ಯಾಂಡ್​​​​​​​​​​​ ಹೋಟೆಲೊಂದರಲ್ಲಿ ಕ್ಯಾಮರಾ ಇಟ್ಟಿದ್ದಾರೆ. ಇನ್ನು ಸಾಯಿ ಪಲ್ಲವಿ ಬ್ಯಾಗ್​​​​​ ಹಿಡಿದು ಕೆಲ ಹೊತ್ತು ಬಸ್​​​ಗಾಗಿ ಕಾದು ಕುಳಿತಂತೆ ನಟಿಸಿ ನಂತರ ಅಲ್ಲಿಂದ ಎದ್ದು ಹೋಗಿದ್ದಾರೆ. ಆಶ್ಚರ್ಯ ಎಂದರೆ ಅಲ್ಲಿ ಜನರು ಓಡಾಡುತ್ತಿದ್ದರೂ ಪಕ್ಕದಲ್ಲೇ ಇದ್ದ ಸಾಯಿ ಪಲ್ಲವಿಯನ್ನು ಮಾತ್ರ ಯಾರೂ ಕಂಡುಹಿಡಿದಿಲ್ಲ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ABOUT THE AUTHOR

...view details