ಕರ್ನಾಟಕ

karnataka

ETV Bharat / sitara

ಮತ್ತೊಂದು ಸಿನಿಮಾಕ್ಕೆ ನಿಖಿಲ್​ ಕುಮಾಸ್ವಾಮಿ ಗ್ರೀನ್​​ ಸಿಗ್ನಲ್.. ಡೈರೆಕ್ಟರ್​​ ಯಾರು? - ನಿಖಿಲ್​ ಕುಮಾಸ್ವಾಮಿ ಮತ್ತೊಂದು ಸಿನಿಮಾ

ನಿಖಿಲ್​ ಕುಮಾರಸ್ವಾಮಿ ಇದೀಗ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಪೈಲ್ವಾನ್​ ನಿರ್ದೇಶಕ ಕೃಷ್ಣ ಆ್ಯಕ್ಷನ್​ ಕಟ್​ ಹೇಳುವುದೂ ಕೂಡ ಫೈನಲ್​ ಆಗಿದೆ. ಸಿನಿಮಾ ಬಗ್ಗೆ ಈಗಾಗಲೇ ಕೆಲವು ಮಾಹಿತಿಗಳು ಹರಿದಾಡುತ್ತಿದ್ದು, ಚಿತ್ರವು ನೈಜ ಕಥೆ ಆಧರಿಸಿದ್ದಾಗಿದೆ.

ನಿಖಿಲ್​ ಕುಮಾಸ್ವಾಮಿ

By

Published : Nov 25, 2019, 3:42 PM IST

Updated : Nov 25, 2019, 6:41 PM IST

ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರ ಸಿನಿಮಾ ನಂತ್ರ ನಿಖಿಲ್​ ಕುಮಾರಸ್ವಾಮಿ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲ ಎಲ್ಲರಿಗೂ ಮೂಡಿತ್ತು. ಈ ಕುತೂಹಲವನ್ನು ನಿಖಿಲ್​​ ಕೊಂಚ ಮಟ್ಟಿಗೆ ತಣಿಸಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ಇದೀಗ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಪೈಲ್ವಾನ್​ ಸಿನಿಮಾ ನಿರ್ದೇಶಕ ಕೃಷ್ಣ ಆ್ಯಕ್ಷನ್​ ಕಟ್​ ಹೇಳುವುದೂ ಕೂಡ ಫೈನಲ್​ ಆಗಿದೆ. ಇನ್ನು ಈ ಸಿನಿಮಾ ಬಗ್ಗೆ ಈಗಾಗಲೇ ಕೆಲವು ಮಾಹಿತಿಗಳು ಹರಿದಾಡುತ್ತಿದ್ದು, ಚಿತ್ರವು ನೈಜ ಕಥೆ ಆಧರಿಸಿ ನಿರ್ಮಾಣವಾಗುತ್ತದೆ ಎಂದು ಹೇಳಲಾಗ್ತಿದೆ.

ಸದ್ಯ ಇರುವ ಮಾಹಿತಿ ಪ್ರಕಾರ ಸಿನಿಮಾದ ಸಿನಿಮಾದಲ್ಲಿ ನಿಖಿಲ್​​ ಕುಮಾರಸ್ವಾಮಿ ನಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ. ಮತ್ತು ಕೃಷ್ಣ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ 2020ಕ್ಕೆ ಸೆಟ್ಟೇರಲಿದೆಯಂತೆ ಇಷ್ಟು ಮಾಹಿತಿ ಬಿಟ್ಟರೆ ಮತ್ಯಾವ ಮಾಹಿತಿಯೂ ತಿಳಿದುಬಂದಿಲ್ಲ.

Last Updated : Nov 25, 2019, 6:41 PM IST

ABOUT THE AUTHOR

...view details