ಕರ್ನಾಟಕ

karnataka

ETV Bharat / sitara

ಕಾಫಿ ಕಟ್ಟೆ: ಒಂದೇ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ 35 ಹಾಸ್ಯನಟರ ಮಹಾಸಂಗಮ! - ಕನ್ನಡ ಚಿತ್ರ

ಹೊಸದಾಗಿ ನಿರ್ಮಾಣವಾಗುತ್ತಿರೋ ಈ ಕನ್ನಡ ಚಿತ್ರದ ಮೂಲಕ ದಾಖಲೆಯೊಂದು ಸೃಷ್ಟಿಯಾಗಲಿದೆ. ಅದು ಏನಪ್ಪಾ ಅಂದ್ರೆ, ಸಾಮಾನ್ಯವಾಗಿ ಚಿತ್ರವೊಂದರಲ್ಲಿ ಬೆರಳೆಣಿಕೆಯಷ್ಟು ಹಾಸ್ಯ ಕಲಾವಿದರಿರುತ್ತಾರೆ. ಆದ್ರೆ ಈ ಚಿತ್ರದಲ್ಲಿ ಬರೋಬ್ಬರಿ 35 ದಿಗ್ಗಜ ಹಾಸ್ಯಕಲಾವಿದರು ಹಸ್ಯ ಚಟಾಕಿ ಸಿಡಿಸಲು ಸಜ್ಜಾಗಿದ್ದಾರೆ.

ಈ ಕನ್ನಡ ಚಿತ್ರದಲ್ಲಿರಲಿದ್ದಾರೆ ಬರೋಬ್ಬರಿ 35 ಖ್ಯಾತ ಹಾಸ್ಯ ಕಲಾವಿದರು

By

Published : Jul 30, 2019, 5:45 AM IST

ಕನ್ನಡ ಚಿತ್ರರಂಗದಲ್ಲಿ ಸದ್ಯ ಬರುತ್ತಿರುವ ಹೊಸ ಸಿನಿಮಾಗಳಲ್ಲಿ ಒಬ್ಬರು ಅಥವಾ ಇಬ್ಬರು ಹಾಸ್ಯ ನಟರಿರುತ್ತಾರೆ. ಆದ್ರೆ ಈ ಸಿನಿಮಾದಲ್ಲಿರೋ ಹಾಸ್ಯ ನಟರ ಸಂಖ್ಯೆ ಒಂದೆರಡಲ್ಲ. ಬರೋಬ್ಬರಿ 35.

ಈ ಹಿಂದೆ ಗುರುಶಿಷ್ಯರು ಸಿನಿಮಾದಲ್ಲಿ ದ್ವಾರಕೀಶ್ ಸೇರಿದಂತೆ 10ಕ್ಕೂ ಹೆಚ್ಚು ಜನ‌ ಹಾಸ್ಯ ನಟರು ಒಟ್ಟಿಗೆ ಅಭಿನಯಿಸಿದ್ದರು. ಇದೀಗ ಕನ್ನಡದ ಖ್ಯಾತ 35 ಜನ ಹಾಸ್ಯ ಕಲಾವಿದರು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಾಫಿಕಟ್ಟೆ ಅಂತ ಟೈಟಲ್ ಇಡಲಾಗಿದ್ದು, ಈ ಚಿತ್ರದಲ್ಲಿ ಉಮೇಶ್, ಹೊನ್ನವಳ್ಳಿ ಕೃಷ್ಣ, ಬೆಂಗಳೂರು ನಾಗೇಶ್, ಬಿರಾದಾರ್, ಡಿಂಗ್ರಿ ನಾಗರಾಜ್, ಸುಂದರರಾಜ್, ರಮೇಶ್ ಭಟ್ ,ರೇಖಾದಾಸ್, ಮಿಮಿಕ್ರಿ ದಯಾನಂದ್ ಹೀಗೆ 35ಕ್ಕೂ ಹೆಚ್ಚು ಹಾಸ್ಯ ಕಲಾವಿದರು ನಟಿಸುತ್ತಿರುವುದು ವಿಶೇಷ.

ಸದ್ಯ ಈ ಸಿನಿಮಾದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಹಾಸ್ಯ ಕಲಾವಿದರು ಸಿನಿಮಾದಲ್ಲಿ ತಮ್ಮ ಪಾತ್ರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಹಂಚಿಕೊಂಡಿದ್ದಾರೆ.

ಈ ಕನ್ನಡ ಚಿತ್ರದಲ್ಲಿರಲಿದ್ದಾರೆ ಬರೋಬ್ಬರಿ 35 ಖ್ಯಾತ ಹಾಸ್ಯ ಕಲಾವಿದರು

ವಯಸ್ಸಾದ ಮೇಲೆ ಮನುಷ್ಯನ ಜೀವನ ಹೇಗಿರುತ್ತೆ ಎಂಬ ಎಳೆಯನ್ನಿಟ್ಟುಕೊಂಡು ನಿರ್ದೇಶಕ ಎಂ.ಆರ್. ಕಪಿಲ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.‌ ಈ ಹಿಂದೆ ಹಸಿವು ಮತ್ತು ಅರಿವು ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಕಪಿಲ್, ಈ ಬಾರಿ ಕನ್ನಡದ ಖ್ಯಾತ ಹಾಸ್ಯನಟರನ್ನಿಟ್ಟುಕೊಂಡು ಈ ಎಂಬ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಇನ್ನು ರಾಘವೇಂದ್ರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ. ಆರ್. ನರಸಿಂಹಮೂರ್ತಿ ಈ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆಯನ್ನು ಬರೆಯುತ್ತಿದ್ದು, ಗೋಪಿ ಕಲಾಕರ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ‌. ಸಿ ನಾರಾಯಣ್ ಅವರ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದ್ದು‌, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದೆ.

ನಿರ್ದೇಶಕ ಕಪಿಲ್ ಹೇಳುವ ಪ್ರಕಾರ ಆದಷ್ಟು ಬೇಗ ಸಿನಿಮಾದ ಚಿತ್ರೀಕರಣ ಮುಗಿಸಿ ಕೆಲವು ತಿಂಗಳುಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ‌.

ABOUT THE AUTHOR

...view details