ಕರ್ನಾಟಕ

karnataka

ETV Bharat / sitara

'ವಿಕ್ರಾಂತ್ ರೋಣ' ಹಿಂದಿ ಡಬ್ಬಿಂಗ್ ಮುಗಿಸಿದ ನೀತಾ ಅಶೋಕ್​ ಹೇಳಿದ್ಧೇನು? - ವಿಕ್ರಾಂತ್ ರೋಣ ಡಬ್ಬಿಂಗ್

ವಿಕ್ರಾಂತ್ ರೋಣದ ಹಿಂದಿ ಡಬ್ಬಿಂಗ್ ಮುಗಿಸಿದ್ದಕ್ಕೆ ಬಹಳ ಸಂತಸವಾಗಿದೆ. ಪಾತ್ರಕ್ಕೆ ಸ್ವತಃ ನಾನೇ ಧ್ವನಿ ನೀಡಿದ್ದೇನೆ. ಕನ್ನಡದೊಂದಿಗೆ ಹಿಂದಿಗೂ ಧ್ವನಿ ನೀಡಿರುವುದು ಸಖತ್ ಥ್ರಿಲ್ ಆಗಿದೆ ಎಂದು ನಟಿ ನೀತಾ ಅಶೋಕ್ ಹೇಳಿದ್ದಾರೆ.

neetha-ashok-completed-dubbing-for-vikkrant-rona
'ವಿಕ್ರಾಂತ್ ರೋಣ' ಹಿಂದಿ ಡಬ್ಬಿಂಗ್ ಮುಗಿಸಿದ ನೀತಾ ಅಶೋಕ್​ ಹೇಳಿದ್ಧೇನು?

By

Published : Oct 14, 2021, 3:07 AM IST

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವು ಅದ್ಧೂರಿ ಮೇಕಿಂಗ್ ಹಾಗೂ ಟೈಟಲ್​ನಿಂದಲೇ ಹವಾ ಸೃಷ್ಟಿಸಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ಸುದೀಪ್​ ಡಬ್ಬಿಂಗ್ ಮುಗಿಸಿದ್ದು, ಇದೀಗ ಚಿತ್ರದ ನಾಯಕಿ ನೀತಾ ಅಶೋಕ್ ಹಿಂದಿ ವರ್ಷನ್​ಗೆ ಡಬ್ಬಿಂಗ್ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೀತಾ ಅಶೋಕ್, ವಿಕ್ರಾಂತ್ ರೋಣದ ಹಿಂದಿ ಡಬ್ಬಿಂಗ್ ಮುಗಿಸಿದ್ದಕ್ಕೆ ಬಹಳ ಸಂತಸವಾಗಿದೆ. ಪಾತ್ರಕ್ಕೆ ಸ್ವತಃ ನಾನೇ ಧ್ವನಿ ನೀಡಿದ್ದೇನೆ. ಕನ್ನಡದೊಂದಿಗೆ ಹಿಂದಿಗೂ ಧ್ವನಿ ನೀಡಿದ್ದು ಸಖತ್ ಥ್ರಿಲ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ನೀತಾ ಅಶೋಕ್ ಹಂಚಿಕೊಂಡ ಫೋಟೊದಲ್ಲಿ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಕೂಡ ಇದ್ದಾರೆ.

ಡಬ್ಬಿಂಗ್ ಮಾಡುವ ಟಿವಿ ಸ್ಕ್ರೀನ್​ನಲ್ಲಿ ನೀತಾ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ, ವಿಕ್ರಾಂತ್ ರೋಣ ಸಿನಿಮಾದ ಗುಣಮಟ್ಟ, ಕಲರ್ ಗ್ರೇಡಿಂಗ್ ಹಾಗೂ ಮೇಕಿಂಗ್ ಹಾಲಿವುಡ್ ಶೈಲಿಯಲ್ಲಿದೆ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದು ನೀತಾ ಅಶೋಕ್ ಅಲ್ಲದೇ ನಿರ್ದೇಶಕ ಅನೂಪ್ ಭಂಡಾರಿಗೆ ಖುಷಿ ತಂದಿದೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಸೇರಿದಂತೆ ಹಲವರು ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.

ಇದನ್ನೂ ಓದಿ:ಗೋವಾದಲ್ಲಿ ರಜಾ -ಮಜಾ.. ಗೆಳೆಯನೊಂದಿಗೆ ಜಾಲಿ ಮೂಡ್​ನಲ್ಲಿ ನಟಿ ಅಲಯಾ

ABOUT THE AUTHOR

...view details