ಕರ್ನಾಟಕ

karnataka

ETV Bharat / sitara

ಜಿಮ್​​ನಲ್ಲಿ ನೀನಾಸಂ ಸತೀಶ್ ವರ್ಕೌಟ್​... ಶೀಘ್ರದಲ್ಲೇ ಮಾಸ್ ಟೈಟಲ್ ಔಟ್​! - ಹೊಸ ಚಿತ್ರ

ಹೊಸ ಲುಕ್​ನಲ್ಲಿ ಅಭಿಮಾನಿಗಳ ಮನಗೆಲ್ಲಲು ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ ನೀನಾಸಂ ಸತೀಶ. ಶೀಘ್ರದಲ್ಲೆ ಹೊಸ ಚಿತ್ರದ ಬಗ್ಗೆ ತಿಳಿಸುತ್ತೇನೆ ಎಂದ್ರು ಅಭಿನಯ ಚತುರ.

ನಟ ನೀನಾಸಂ ಸತೀಶ

By

Published : Sep 15, 2019, 12:47 PM IST

Updated : Sep 15, 2019, 1:00 PM IST

ಬೆಂಗಳೂರು: ಅಭಿನಯ ಚತುರ ನೀನಾಸಂ ಸತೀಶ್ ಬ್ರಹ್ಮಚಾರಿ ಚಿತ್ರದ ಡಬ್ಬಿಂಗ್ ಮುಗಿಸಿ ಗೋದ್ರ, ಪರಿಮಳ ಲಾಡ್ಜ್ ಹಾಗೂ ತಮಿಳಿನ ಚಿತ್ರವೊಂದರ ಶೂಟಿಂಗ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಅವರು ಜಿಮ್​ನಲ್ಲಿ ಸಖತ್ ವರ್ಕ್ ಔಟ್ ಮಾಡಿ ದೇಹ ಹುರಿಗೊಳಿಸ್ತಿದ್ದಾರೆ.

ಅಯ್ಯೋ ಈ 'ಬ್ರಹ್ಮಚಾರಿ'ಗೆ ಯಾಕಪ್ಪ ಜಿಮ್ ವರ್ಕ್ ಔಟ್ ಅಂತಾ ಗಾಂಧಿನಗರದ ಮಂದಿ ಗುಸು, ಗುಸು ಮಾತು ಶುರು ಮಾಡ್ಕೊಂಡವ್ರೆ. ಅವರ ಅಭಿಮಾನಿಗಳು ಮಾತ್ರ ಹೊಸ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದುವರೆಗೂ ಹ್ಯೂಮರಸ್ ಪಾತ್ರಗಳಲ್ಲೆ ಹೆಚ್ಚು ಕಾಣಿಸಿದ್ದ ಸತೀಶ್ ಸದ್ಯದಲ್ಲೇ ಔಟ್ ಅಂಡ್ ಔಟ್ ಮಾಸ್ ಚಿತ್ರದಲ್ಲಿ ಕಾಣಿಸಲಿದ್ದಾರೆ.

ನಟ ನೀನಾಸಂ ಸತೀಶ

ಆ ಚಿತ್ರಕ್ಕಾಗಿ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ಆದ್ರೆ ಆ ಹೊಸ ಚಿತ್ರಕ್ಕೆ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ಶೀಘ್ರದಲ್ಲೇ ಟೈಟಲ್ ಹಾಗೂ ಚಿತ್ರತಂಡವನ್ನು ಆಫಿಶೀಯಲ್ ಆಗಿ ಹೇಳುವುದಾಗಿ ನೀನಾಸಂ ಸತೀಶ್ 'ಈ ಟಿವಿ ಭಾರತ'ಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸತೀಶ್ ಅವರನ್ನು ನಾರ್ಮಲ್ ಪಾತ್ರಗಳಲ್ಲೇ ನೋಡಿದ ಅಭಿಮಾನಿಗಳಿಗೆ ಶೀಘ್ರದಲ್ಲೆ ಸಿಕ್ಸ್ ಫ್ಯಾಕ್ ದರ್ಶನ ಮಾಡಿಸೋಕೆ ಬ್ರಹ್ಮಚಾರಿ ಭರ್ಜರಿಯಾಗಿ ರೆಡಿಯಾಗ್ತಿದ್ದಾರೆ.

Last Updated : Sep 15, 2019, 1:00 PM IST

ABOUT THE AUTHOR

...view details