ಕರ್ನಾಟಕ

karnataka

ETV Bharat / sitara

‘ತೋತಾಪುರಿ’ ಡಬ್ಬಿಂಗ್​​ನಲ್ಲಿ ನವರಸ ನಾಯಕ ಜಗ್ಗೇಶ್: ಸಿನಿಮಾ ಯಾವಾಗ ತೆರೆಗೆ?

ಬಹುತೇಕ ಶೂಟಿಂಗ್ ಮುಗಿಸಿರೋ ತೋತಾಪುರಿ ಚಿತ್ರತಂಡ ಈಗ ಡಬ್ಬಿಂಗ್ ಹಂತದಲ್ಲಿದೆ. ಜಗ್ಗೇಶ್‌ಗೆ ಜೋಡಿಯಾಗಿ ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

film Thotapuri dubbing
ಬಹುತೇಕ ಶೂಟಿಂಗ್ ಮುಗಿಸಿರೋ, ತೋತಾಪುರಿ ಚಿತ್ರತಂಡ ಈಗ ಡಬ್ಬಿಂಗ್ ಹಂತದಲ್ಲಿದೆ. ಜಗ್ಗೇಶ್ ಜೋಡಿಯಾಗಿ, ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲ ಹಿರಿಯ ನಟ ದತ್ತಣ್ಣ, ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

By

Published : Jul 13, 2021, 10:40 PM IST

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ತೋತಾಪುರಿ. ನವರಸ ನಾಯಕ ಜಗ್ಗೇಶ್ ಬಹಳ ವರ್ಷಗಳ ಬಳಿಕ ಪಕ್ಕಾ ಹಳ್ಳಿ ಹೈದನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ಈ ಸಿನಿಮಾ ಚಿತ್ರೀಕರಣ ಮಾಡುವ ಟೈಮಲ್ಲಿ, ನಿರ್ದೇಶಕ ವಿಜಯ ಪ್ರಸಾದ್ ತೋತಾಪುರಿ ಸಿನಿಮಾ ಪಾರ್ಟ್ ಒನ್ ಹಾಗೂ ಪಾರ್ಟ್-2 ಬರುತ್ತೆ ಅಂತಾ ಹೇಳಿದ್ದರು.

ಇದೀಗ ತೋತಾಪುರಿ ಭಾಗ-2 ಡಬ್ಬಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಜಗ್ಗೇಶ್ ತಮ್ಮ ಪಾತ್ರಕ್ಕೆ ಮಾತಿನ ಮನೆಯಲ್ಲಿ ಡಬ್ಬಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಜಗ್ಗೇಶ್ ತಾವು ರೈತನ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿರುವ ಕ್ಷಣವನ್ನ ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನೀರ್ ದೋಸೆ' ಬಳಿಕ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಕಾಂಬಿನೇಷನ್​​ನಲ್ಲಿ ಬರ್ತಾ ಇರೋ ಬಹುನಿರೀಕ್ಷಿತ ಚಿತ್ರ ತೋತಾಪುರಿ.

ತೋತಾಪುರಿ ಸಿನಿಮಾದ ದೃಶ್ಯ

ಬಹುತೇಕ ಶೂಟಿಂಗ್ ಮುಗಿಸಿರೋ ಚಿತ್ರತಂಡ ಈಗ ಡಬ್ಬಿಂಗ್ ಹಂತದಲ್ಲಿದೆ. ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲ ಹಿರಿಯ ನಟ ದತ್ತಣ್ಣ, ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರಕ್ಕೆ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ.

ತೋತಾಪುರಿ ಸಿನಿಮಾದ ದೃಶ್ಯ

ಗೋವಿಂದಾಯ ನಮಃ ಹಾಗೂ ಶಿವಲಿಂಗದಂತಹ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ.ಎ.ಸುರೇಶ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಕೊರೊನಾ ಮುಗಿದ ಮೇಲೆ ತೋತಾಪುರಿಯನ್ನ ರಿಲೀಸ್ ಮಾಡುವ ಯೋಜನೆಯಲ್ಲಿದ್ದಾರೆ ನಿರ್ಮಾಪಕ ಸುರೇಶ್.

ತೋತಾಪುರಿ ತಂಡ

ಇದನ್ನೂ ಓದಿ: 'ಭೂಪತಿ' vs ಉಮಾಪತಿ ಮನಸ್ತಾಪಕ್ಕೆ ಪೂರ್ಣವಿರಾಮ: 'ಲೇಡಿ' ವಿರುದ್ಧ ಸಮರಕ್ಕೆ 'ದುರ್ಯೋಧನ'ನ ತಯಾರಿ

ABOUT THE AUTHOR

...view details