ಕರ್ನಾಟಕ

karnataka

ETV Bharat / sitara

ಮೊದಲ ಚಿತ್ರದಲ್ಲೇ ಸಕ್ಸಸ್​​​​​​​​​​​​​​​​​​​​​​​​​​​​​​ ಕಂಡ ಡಾ. ಕಿರಣ್​​... ತಮ್ಮ ಕಚೇರಿಗೆ ಕರೆಸಿಕೊಂಡು ಬೆನ್ನು ತಟ್ಟಿದ ಹಂಸಲೇಖ - ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ತಂತ್ರಜ್ಞರಿಗೇನೂ ಕೊರತೆ ಇಲ್ಲ. ಕೆಲವು ಪ್ರತಿಭಾನ್ವಿತರಿಗೆ ಅವಕಾಶ ಸಿಗದೆ ತೆರೆಮರೆಯಲ್ಲೇ ಮರೆಯಾಗಿ ಹೋಗ್ತಾರೆ. ಇನ್ನು ಕೆಲವರು ಸಿಕ್ಕಿದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂಥವರ ಸಾಲಿನಲ್ಲಿ ಸದ್ಯ ನಿಂತಿರುವುದು ಡಾ. ಕಿರಣ್ ತೋಟಂಬೈಲು.

ಡಾ.ಕಿರಣ್​​, ಹಂಸಲೇಖ

By

Published : Jul 28, 2019, 8:50 PM IST

ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಂಗೀತದ ಮೇಲಿನ ಮೋಹದಿಂದ 'ಐ ಲವ್​ ಯು' ಚಿತ್ರದ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು ಸಂಗೀತ ಬ್ರಹ್ಮ ಹಂಸಲೇಖ ಅವರ ಹಾದಿಯಲ್ಲಿ ಸಾಗಿ ಅವರ ಹಾಡುಗಳಿಂದಲೇ ಸ್ಫೂರ್ತಿ ಪಡೆದು ಇಂದು ಸಂಗೀತ ನಿರ್ದೇಶಕರಾಗಿದ್ದಾರೆ.

ವೈದ್ಯರಾಗಿದ್ದರೂ ಕೂಡಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂಬ ಹಠದೊಂದಿಗೆ ಕಿರಣ್ ತನ್ನದೇ ಆದ ಒಂದು ಪುಟ್ಟ ಸ್ಟುಡಿಯೋ ನಿರ್ಮಾಣ ಮಾಡಿಕೊಂಡು ಟ್ಯೂನ್ ಕಂಪೋಸ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಆದರೆ ಅದೇ ವೇಳೆ ಹೊಸ ಸಂಗೀತ ನಿರ್ದೇಶಕರನ್ನು ಹುಡುಕುತ್ತಿದ್ದ ಆರ್.ಚಂದ್ರು, ಕಿರಣ್ ಪ್ರತಿಭೆಯನ್ನು ಗುರುತಿಸಿ ಅವರ ಬಹುನಿರೀಕ್ಷಿತ ಹೈ ಬಜೆಟ್ 'ಐ ಲವ್ ಯು' ಚಿತ್ರಕ್ಕೆ ಸಂಗೀತ ನೀಡಲು ಆಫರ್ ನೀಡಿದ್ದಾರೆ. ಮೊದಲ ಬಾರಿಗೆ ದೊಡ್ಡ ಸಿನಿಮಾ ಸಿಕ್ಕಿದ್ದರಿಂದ ಹೆಚ್ಚು ಜವಾಬ್ದಾರಿಯುತವಾಗಿಯೇ ಡಾ. ಕಿರಣ್ 'ಐ ಲವ್ ಯು' ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಗೆಲುವಿಗೆ ಶ್ರಮಿಸಿ ನಿರ್ದೇಶಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಡಾ. ಕಿರಣ್ ಯಶಸ್ವಿಯಾದರು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಕಿರಣ್ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

ಡಾ. ಕಿರಣ್​​ ಸ್ಟುಡಿಯೋ

ಎಂಬಿಬಿಎಸ್​​​ನಲ್ಲಿ ಗೋಲ್ಡ್ ಮೆಡಲ್ ಸ್ಟೂಡೆಂಟ್ ಆದ ಡಾಕ್ಟರ್ ಕಿರಣ್​​​ಗೆ ವೈದ್ಯಲೋಕದ ಮೇಲಿರುವಷ್ಟೇ ಆಸಕ್ತಿ ಸಂಗೀತದ ಮೇಲೂ ಇದೆ. ಅದಕ್ಕಾಗಿಯೇ 'ಐ ಲವ್ ಯು' ಚಿತ್ರಕ್ಕಾಗಿ ಡಾಕ್ಟರ್ ಕಿರಣ್ ಬರೋಬ್ಬರಿ 75 ದಿನಗಳ ಕಾಲ ಟ್ಯೂನ್ ಕಂಪೋಸ್ ಮಾಡಿದರಂತೆ. ಇದು ಅವರ ಚಿತ್ರದ ಮೇಲಿನ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಚಿತ್ರ 50 ದಿನಗಳತ್ತ ದಾಪುಗಾಲಿಟ್ಟಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೆ ಕಿರಣ್ ಅವರ ಹಾಡುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಲು ಸಾಲು ಚಿತ್ರಗಳು ಅವರನ್ನು ಅರಸಿ ಬಂದಿವೆ. ಈಗಾಗಲೇ ಡಾಕ್ಟರ್ ಕಿರಣ್ ಇನ್ನೂ ಸೆಟ್ಟೇರದ 'ಧೀರ ಸಾಮ್ರಾಟ್', 'ಒಲವೇ ಮಂದಾರ 2' ಚಿತ್ರಗಳಿಗೆ ಕಮಿಟ್ ಆಗಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಲಿರುವ 'ಜಂಗಮ' ಚಿತ್ರಕ್ಕೂ ಅವರೇ ಟ್ಯೂನ್ ಮಾಡಲಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಕೂಡಾ ಈಗಾಗಲೇ ಅವರ ಮುಂದಿನ ಚಿತ್ರಕ್ಕೆ ಸಂಗೀತ ನೀಡುವಂತೆ ಡಾಕ್ಟರ್ ಕಿರಣ್​​ಗೆ ಆಫರ್ ಕೊಟ್ಟಿದ್ದಾರೆ.

ಇನ್ನು ಇವುಗಳ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 54ನೇ ಸಿನಿಮಾ 'ಪಾಶುಪತಾಸ್ತ್ರ' ಚಿತ್ರತಂಡದ ಜೊತೆ ಡಾಕ್ಟರ್ ಕಿರಣ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಕಾರಣ ಡಾಕ್ಟರ್ ಕಿರಣ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ನಂತರ ಸಂಜೆ ಮೇಲೆ ಕತ್ರಿಗುಪ್ಪೆಯಲ್ಲಿರುವ ಅವರ ಸ್ಟುಡಿಯೋದಲ್ಲಿ ಸಂಗೀತಕ್ಕಾಗಿ ದಿನಕ್ಕೆ 5-6 ಗಂಟೆಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಮದುವೆಯಾಗಿ ಎರಡು ಮುದ್ದಾದ ಮಕ್ಕಳಿರುವ ಡಾಕ್ಟರ್ ಕಿರಣ್ ಅವರಿಗೆ ಅವರ ಮಡದಿ ಸಂಗೀತದ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದು, ಅವರ ಕೆಲಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಾರೆ. ಇನ್ನು ಹಂಸಲೇಖ ಅವರ ಪಕ್ಕಾ ಅಭಿಮಾನಿಯಾಗಿರುವ ಡಾಕ್ಟರ್ ಕಿರಣ್ ಅವರಿಗೆ 'ಐ ಲವ್ ಯು' ಚಿತ್ರದ ಸಕ್ಸಸ್ ಹಂಸಲೇಖ ಅವರ ಭೇಟಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆಯಂತೆ.

ಇತ್ತೀಚಿಗೆ ಕಿರಣ್​​​​ಗೆ ನಾದಬ್ರಹ್ಮ ಫೋನ್ ಮಾಡಿ ಅವರ ಕಚೇರಿಗೆ ಕರೆಸಿಕೊಂಡು ಬೆನ್ನು ತಟ್ಟಿದ್ದಾರಂತೆ. ಅಲ್ಲದೆ ಚಿತ್ರದ ಹಾಡಿಗಳನ್ನು ಕಿರಣ್​​ ಅವರ ಕೈಲಿ ಹಾಡಿಸಿ ಹಂಸಲೇಖ ಎಂಜಾಯ್ ಮಾಡಿದ್ದಾರಂತೆ. ಇದು ಕಿರಣ್ ಅವರ ಜೀವನದಲ್ಲಿ ಮರೆಯಲಾಗದ ದಿನವಂತೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣಕ್ಕೂ ಕೈ ಹಾಕುವ ಯೋಚನೆಯಲ್ಲಿರುವ ಡಾಕ್ಟರ್ ಕಿರಣ್ ಅವರು ಈಗಾಗಲೇ ಒಂದು ಅದ್ಭುತ ಲವ್ ಸ್ಟೋರಿಯನ್ನು ಬರೆದಿದ್ದಾರಂತೆ. ಇನ್ನು ಚಿತ್ರಗಳ ಕಮಿಟ್​​ಮೆಂಟ್​​ ಮುಗಿದ ತಕ್ಷಣ ಈ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿ ಇದ್ದೀನಿ ಎಂದು ಡಾಕ್ಟರ್ ಕಿರಣ್ ಈಟಿವಿ ಭಾರತ್ ಜೊತೆ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.

ABOUT THE AUTHOR

...view details