ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಚಿತ್ರ 'ದಿಲ್ ಬೆಚಾರ' ಒಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಮುಖೇಶ್ ಛಾಬ್ರಾ ಸುಶಾಂತ್ ಹಾಗೂ ತಮ್ಮ ನಡುವಿನ ಬಾಂಧವ್ಯದ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
"ಕೈ ಪೊ ಚೆಯಿಂದ ದಿಲ್ ಬೆಚಾರ’’ ಸಿನಿಮಾದವರೆಗೆ ನಮ್ಮಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದವು. ನಾವಿಬ್ಬರು ಸೇರಿ ಅನೇಕ ಪ್ಲಾನ್ಗಳನ್ನು ಮಾಡಿದ್ದೆವು. ಅನೇಕ ಕನಸುಗಳನ್ನು ಇಬ್ಬರು ಜೊತೆಯಾಗಿ ಕಂಡಿದ್ದೆವು. ಆದರೆ ಇಂದು ಆತನಿಲ್ಲದೆ, ಸಿನಿಮಾ ರಿಲೀಸ್ ಮಾಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ"ಎಂದು ಭಾವುಕ ಪೋಸ್ಟ್ ಮಾಡಿದ್ದಾರೆ.
"ದಿಲ್ ಬೆಚಾರಾ ಸಿನಿಮಾ ರಿಲೀಸ್ ಆಗುತ್ತಿದೆ. ನಿನ್ನ ನಗುವಿನ ಮೂಲಕ ನಮ್ಮನ್ನು ಮೇಲಿಂದ ಆಶೀರ್ವದಿಸುತ್ತೀಯಾ ಎಂದು ಭಾವಿಸಿದ್ದೇನೆ. ಈ ಸಿನಿಮಾಗೆ ಸುಶಾಂತ್ ನೀಡಿದ ಪ್ರೀತಿ ಮತ್ತು ಸಹಕಾರದ ಪತ್ರೀಕವಾಗಿ ಚಂದಾದಾರರಿಗೆ ಹಾಗೂ ಚಂದದಾರರಲ್ಲದವರೂ ವೀಕ್ಷಿಸಲು ಅವಕಾಶ ಮಾಡಲಾಗಿದೆ" ಎಂದು ಬರೆದಿದ್ದಾರೆ.
ಇನ್ನು ವಸ್ತ್ರ ವಿನ್ಯಾಸ ನಿರ್ದೇಶಕ ಸಹ ಸುಶಾಂತ್ ಕುರಿತು ಪೋಸ್ಟ್ ಮಾಡಿದ್ದು, ಅವರ ಸಲಹೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದಿದ್ದಾರೆ.
ದಿಲ್ ಬೆಚಾರ ಸಿನಿಮಾ ಜುಲೈ 24ರಂದು ಡಿಸ್ನೆ+ ಹಾಟ್ಸ್ಟಾರ್ಗಳಲ್ಲಿ ಬಿಡುಗಡೆಗೊಳ್ಳಲಿದೆ. ಇದು ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿದ್ದು, ಸುಶಾಂತ್ ಸಿಂಗ್ ರಜಪೂತ್ಗೆ ಗೌರವ ಸೂಚಕವಾಗಿದೆ.