ಕರ್ನಾಟಕ

karnataka

ETV Bharat / sitara

ರಮ್ಯ, ರಾಧಿಕಾ ಪಂಡಿತ್​​​ ಫೇಸ್​​​​ಬುಕ್ ಮಾತುಕತೆ ಬಗ್ಗೆ ಸಿನಿಪ್ರಿಯರ ಬಿಸಿ ಬಿಸಿ ಚರ್ಚೆ

ಸೋಷಿಯಲ್ ಮೀಡಿಯಾದಲ್ಲಿ ಸ್ಯಾಂಡಲ್​ವುಡ್ ನಟಿಯರಾದ ರಮ್ಯ ಹಾಗೂ ರಾಧಿಕಾ ಪಂಡಿತ್ ಒಬ್ಬರಿಗೊಬ್ಬರು ಕಮೆಂಟ್ ಮಾಡಿರುವ ವಿಚಾರವನ್ನು ಸಿನಿಪ್ರಿಯರು ಬಹಳ ಚರ್ಚೆ ಮಾಡುತ್ತಿದ್ದಾರೆ.

Ramya and Radhika pandit
ರಮ್ಯ, ರಾಧಿಕಾ ಪಂಡಿತ್​​​

By

Published : Aug 12, 2020, 10:39 AM IST

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇಬ್ಬರು ಸ್ಟಾರ್ ಹೀರೋಗಳಿಗೆ ಅಥವಾ ಇಬ್ಬರು ಸ್ಟಾರ್ ಹೀರೋಯಿನ್​​​ಗಳ ನಡುವೆ ಒಳ್ಳೆಯ ಸಂಬಂಧ ಇರುವುದಿಲ್ಲ ಎಂಬ ಮಾತಿದೆ. ಆದರೆ ಈ ಮಾತನ್ನು ಸುಳ್ಳು ಮಾಡಿದ್ದಾರೆ ಮೋಹಕ ತಾರೆ ರಮ್ಯ ಹಾಗೂ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್.

ರಾಧಿಕಾ ಪಂಡಿತ್ ಫೇಸ್​​ಬುಕ್ ಪೋಸ್ಟ್​​​​

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಸ್ಯಾಂಡಲ್​​​​​​​​​​​​​​​​​​​​​ವುಡ್ ಕ್ವೀನ್ ಆಗಿ ಮೆರೆದ ನಟಿ, ಮೋಹಕ ತಾರೆ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಬಹಳ ಆ್ಯಕ್ಟಿವ್ ಆಗಿದ್ದಾರೆ. ರಾಧಿಕಾ ಪಂಡಿತ್ ಕೂಡಾ ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾ, ಮದುವೆ, ಮಕ್ಕಳ ಫೋಟೋ, ವಿಡಿಯೋಗಳನ್ನು ಷೇರ್ ಮಾಡುವ ಮೂಲಕ ಆ್ಯಕ್ಟಿವ್​​​ ಇದ್ದಾರೆ. ಇದೀಗ ರಾಧಿಕಾ ಪಂಡಿತ್ ಅವರ ಪೋಸ್ಟ್ ಒಂದಕ್ಕೆ ರಮ್ಯಾ ಕಮೆಂಟ್ ಮಾಡುವ ಮೂಲಕ ಇಬ್ಬರೂ ಸುದ್ದಿಯಲ್ಲಿದ್ದಾರೆ.

ರಾಧಿಕಾ ಪೋಸ್ಟ್​​​​ಗೆ ರಮ್ಯಾ ಕಮೆಂಟ್

ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಟೋವೊಂದನ್ನು ಹಾಕುವ ಮೂಲಕ 'ನೀವು ನೀವಾಗಿರಿ' ಎಂದು ಕ್ಯಾಪ್ಷನ್ ಹಾಕಿದ್ದರು. ಇದಕ್ಕೆ ಕಮೆಂಟ್ ಮಾಡಿರುವ ರಮ್ಯ, 'ತುಂಬಾ ಮುದ್ದಾಗಿದ್ದೀರಾ' ಅಂತಾ ರಾಧಿಕಾ ಪಂಡಿತ್ ಪೋಟೋಗೆ ಕಮೆಂಟ್ ಮಾಡಿದ್ದರು. ರಮ್ಯ ಕಮೆಂಟ್​​ಗೆ ಪ್ರತಿಕ್ರಿಯಿಸಿರುವ ರಾಧಿಕಾ ಪಂಡಿತ್ 'ನಾನು ನಿಮ್ಮಷ್ಟು ಮುದ್ದಾಗಿಲ್ಲ, ನೀವು ಯಾವಾಗಲೂ ಸುಂದರ' ಅಂತಾ ಹೇಳಿದ್ದಾರೆ. ಇದೀಗ ಈ ಸಂಭಾಷಣೆ ಬಹಳ ಸುದ್ದಿಯಾಗುತ್ತಿದೆ.

ರಮ್ಯ

ನಟಿಯರು ಸಾರ್ವಜನಿಕವಾಗಿ ಒಬ್ಬರಿಗೊಬ್ಬರು ಕಾಂಪ್ಲಿಮೆಂಟ್ಸ್ ನೀಡುವುದು ಬಹಳ ಕಡಿಮೆ. ಅಂತದ್ದರಲ್ಲಿ ರಮ್ಯ ಹಾಗೂ ರಾಧಿಕಾ ಪಂಡಿತ್ ನಡುವಿನ ಬಾಂಧವ್ಯ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ರಮ್ಯ, ರಾಧಿಕಾ ಪಂಡಿತ್ ಗಿಂತ ಮೊದಲು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದವರು. ಲಕ್ಕಿ ಚಿತ್ರದಲ್ಲಿ ರಮ್ಯ, ರಾಧಿಕಾ ಪತಿ ಯಶ್ ಅವರೊಂದಿಗೆ ಅಭಿನಯಿಸಿದ್ದರು.

ಒಟ್ಟಿನಲ್ಲಿ ಕೆಲವರು ಈ ಕಮೆಂಟ್ ಬಗ್ಗೆ ಚರ್ಚೆ ನಡೆಸುತ್ತಿದ್ದರೆ ಅಭಿಮಾನಿಗಳಂತೂ ಇಬ್ಬರ ಫ್ರೆಂಡ್​​ಶಿಪ್ ಇದೇ ರೀತಿ ಇರಲಿ, ನಿಮ್ಮ ಗೆಳೆತನಕ್ಕೆ ಯಾರ ಕಣ್ಣು ಬೀಳದಿರಲಿ ಎಂದು ಹಾರೈಸುತ್ತಿದ್ದಾರೆ.

ABOUT THE AUTHOR

...view details