ಕರ್ನಾಟಕ

karnataka

ETV Bharat / sitara

‌ಮತ್ತೆ ಬಣ್ಣ ಹಚ್ಚಲು ರೆಡಿಯಾದರು ನಟಿ ಮೇಘನಾ ರಾಜ್ : ಚಿರು ಹುಟ್ಟು ಹಬ್ಬದಂದೇ ಕ್ರೈಂ ಥ್ರಿಲ್ಲರ್ ಮೂವಿಗೆ ಸಹಿ - ಸಂಗೀತ ನಿರ್ದೇಶಕ ವಾಸುಕಿ ವೈಭ

ಮೇಘನಾ ರಾಜ್ ತಾಯಿ ಆದ್ಮೇಲೆ ಪೂರ್ಣ ಪ್ರಮಾಣವಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಹೊಸ ಚಿತ್ರದ ಟೈಟಲ್ ಏನು, ಯಾರೆಲ್ಲ ತಾರಾಗಣದಲ್ಲಿರಲಿದ್ದಾರೆ. ಯಾವಾಗಿನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ..

meghana-raj-new-movie
ನಟಿ ಮೇಘನಾ ರಾಜ್

By

Published : Oct 17, 2021, 3:24 PM IST

ಬೆಂಗಳೂರು :ಇಂದು ನಟ ದಿವಂಗತ ಚಿರಂಜೀವಿ ಸರ್ಜಾ ಹುಟ್ಟು ಹಬ್ಬ. ಈ ಸಂಭ್ರಮದಂದೇ ಚಿರು ಪತ್ನಿ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ.‌ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿರೋ ಹೆಸರಿಡದ ಚಿತ್ರ ಸೆಟ್ಟೇರುತ್ತಿದೆ.

ಪಿ ಬಿ ಸ್ಟುಡಿಯೋಸ್ ಲಾಂಛನದಲ್ಲಿ ಪನ್ನಗಾಭರಣ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ವಾಸುಕಿ ವೈಭವ್​, ಹೊಸ ನಿರ್ದೇಶಕ ವಿಶಾಲ್​ ಕೈ ಜೋಡಿಸುತ್ತಿದ್ದಾರೆ. ಕ್ರೈಂ ಥ್ರಿಲರ್ ಸಿನಿಮಾ ಇದಾಗಿದೆ. ನಟಿ ಮೇಘನಾ ರಾಜ್ ಯಾವ ರೀತಿ ಪಾತ್ರ ಮಾಡಲಿದ್ದಾರೆ ಎಂಬುದನ್ನ ಚಿತ್ರ ತಂಡ ಬಿಟ್ಟು ಕೊಟ್ಟಿಲ್ಲ.

ಚಿರು ಅಗಲಿಕೆ, ಜೂನಿಯರ್ ಚಿರು ಆಗಮನದಿಂದ ತಮ್ಮದೇ ಸಮಯದಲ್ಲಿದ್ದ ಮೇಘನಾ ಇದೀಗ ಮತ್ತೆ ಕಮ್​​ ಬ್ಯಾಕ್ ಆಗಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಚಿತ್ರ ತಂಡಕ್ಕೆ ನಿರ್ದೇಶಕ ಟಿ ಎಸ್ ನಾಗಾಭರಣ, ನಟ ಸುಂದರರಾಜ್ ಆಗಮಿಸಿ ಶುಭಕೋರಿದರು.

ಮೇಘನಾ ರಾಜ್ ತಾಯಿ ಆದ್ಮೇಲೆ ಪೂರ್ಣ ಪ್ರಮಾಣವಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಹೊಸ ಚಿತ್ರದ ಟೈಟಲ್ ಏನು, ಯಾರೆಲ್ಲ ತಾರಾಗಣದಲ್ಲಿರಲಿದ್ದಾರೆ. ಯಾವಾಗಿನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ.

ಈ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್, ಚಿರು ಹುಟ್ಟು ಹಬ್ಬದಂದೇ ಹೊಸ ಸಿನಿಮಾ ಮಾಡಲು ಮುಂದಾಗ್ತಿದ್ದೀನಿ.‌ ಇದಕ್ಕೆ ನಾನ್ ತಂದೆ ಹಾಗೂ ಚಿರು ತಂದೆ ಸಿನಿಮಾ ಮಾಡುವಂತೆ ಪ್ರೋತ್ಸಾಹಿಸಿದರು. ಸಿನಿಮಾ ಮಾಡೋದು ಅಂದರೆ ಕ್ಯಾಮೆರಾ ಮುಂದೆ ನಿಲ್ಲೋದು ನಂಗೆ ಖುಷಿಯ ವಿಷ್ಯ ಅಂತಾ ತಿಳಿಸಿದರು.

ಚಿರುಗೆ ಅವ್ರ ಫ್ರೆಂಡ್ಸ್ ಗ್ರೂಪ್ ಇರಲೇಬೇಕು :ಚಿರು ಬರ್ತ್ ಡೇ ಪಾರ್ಟಿ ಅಷ್ಟೇ ಅಲ್ಲ ಯಾವುದೇ ಸಣ್ಣ ಫಂಕ್ಷನ್ ನಡೆದರೂ ಅವರಿಗೆ ಅವ್ರ ಸ್ನೇಹಿತರ ಬಳಗ ಇರಲೇಬೇಕು. ಎಷ್ಟೋ ಸಲ ಚಿರುಗೆ ಕೇಳ್ತಿದ್ದೇ ಎಲ್ಲದಕ್ಕೂ ನಿನ್ ಫ್ರೆಂಡ್ಸ್ ಬೇಕಾ? ಅಷ್ಟು ಜನ ಇರ್ಬೇಕಾ ಅಂತಾ.. ಆದರೆ, ಇವತ್ತು ನೋಡಿದಾಗ ಸಂಪಾದಿಸಿರುವ ಜನರೇ ನನಗೆ ಸಪೋರ್ಟ್ ಆಗಿ ನಿಂತಿದ್ದು ಅಂತ ಚಿರು ನೆನಪು ಮಾಡಿಕೊಂಡರು. ಚಿರು ರೀಲ್ ನಲ್ಲಿ ಅಷ್ಟೇ ಹೀರೋ ಅಲ್ಲ ಬದಲಿಗೆ ರಿಯಲ್ ಆಗಿಯೂ ಹೀರೋನೇ ಆಗಿದ್ದರು ಎಂದರು.

ABOUT THE AUTHOR

...view details