ಕನ್ನಡ ನಟಿಯರಿಗಿಂತ ಬೇರೆ ಭಾಷೆಯ ಬ್ಯೂಟಿಫುಲ್ ಹೀರೋಯಿನ್ಸ್ ಕನ್ನಡದಲ್ಲಿ ಹೈಪ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ತೆಲುಗು, ತಮಿಳು ಹಾಗು ಹಿಂದಿ ಭಾಷೆಯ ನಟಿಯರಿಗಿಂತ ಕೇರಳ ನಟಿಯರು ಸ್ಯಾಂಡಲ್ವುಡ್ನಲ್ಲಿ ಕಮಾಲ್ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.
ಕನ್ನಡ ಚಿತ್ರರಂಗದ ಆರಂಭದ ದಿನದಿಂದಲೂ ಪರಭಾಷೆಯಿಂದ ನಟಿಮಣಿಯರನ್ನು ಕರೆತರುವ ವಾಡಿಕೆ ಇದೆ. ಹಾಗೇ ನೋಡೋದಾದ್ರೆ 70ರ ದಶಕದಿಂದಲೂ, ಮಲಯಾಳಂ ನಟಿಯರು ಕನ್ನಡ ಚಿತ್ರರಂಗದಲ್ಲಿ, ಕನ್ನಡದ ನಟರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಹಾಗಾದ್ರೆ ಸ್ಯಾಂಡಲ್ವುಡ್ನಲ್ಲಿ ಮಲಯಾಳಂ ನಟಿಮಣಿಯರ ದರ್ಬಾರ್ ಹೇಗಿದೆ ಅನ್ನೋದನ್ನ ನೋಡೊಣ ಬನ್ನಿ.
ಚಳಿ ಚಳಿ ತಾಳೆನು ಈ ಚಳಿಯ ಹಾಡನ್ನ ಕೇಳ್ತಾ ಇದ್ರೆ, ಎಲ್ಲಾರ ಕಣ್ಮುಂದೆ ಬರೋದು ರೆಬಲ್ ಸ್ಟಾರ್ ಅಂಬರೀಷ್ ಮತ್ತು ಬ್ಯೂಟಿಫುಲ್ ಹೀರೋಯಿನ್ ಅಂಬಿಕಾ. ನೋಡದಿಕ್ಕೆ ಕನ್ನಡದವರ ತರ ಕಾಣುವ ಅಂಬಿಕಾ ಮೂಲತಃ ಕೇರಳದವರು. 90ರ ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರೋ ಅಂಬಿಕಾ, 1981ರಲ್ಲಿ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಎಂಟ್ರಿ ಕೊಡ್ತಾರೆ. ಅಂದಿನ ದಿಗ್ಗಜ ನಟರಾದ ಡಾ ರಾಜ್ ಕುಮಾರ್ ಹಾಗು ಅಂಬರೀಷ್, ಶ್ರೀನಾಥ್, ಟೈಗರ್ ಪ್ರಭಾಕರ್ರಂತಹ ನಟರ ಜೊತೆ ಅಂಬಿಕಾ ನಟಿಸಿದ್ದಾರೆ. 30ಕ್ಕಿಂತ ಹೆಚ್ಚು ಸಿನಿಮಾಗಳನ್ನ ಕನ್ನಡದಲ್ಲಿ ಮಾಡಿರುವ ಅಂಬಿಕಾ ಮಲಯಾಳಂನ ಸುಂದರಿ ಅಂದ್ರೆ ನಂಬೋದಿಕ್ಕೆ ಆಗೋಲ್ಲ.
ದಕ್ಷಿಣ ಭಾರತದಲ್ಲಿ ತನ್ನ ಸೌಂದರ್ಯದಿಂದಲೇ ಕಮಲ್ ಹಾಸನ್, ರಜನಿಕಾಂತ್, ಮೋಹನ್ ಲಾಲ್ ಹೀಗೆ ದೊಡ್ಡ ನಟರ ಜೊತೆ ನಟಿಸಿದ ನಟಿ ಊರ್ವಶಿ. 1980ರಲ್ಲಿ ನ್ಯಾಯ ನೀತಿ ಧರ್ಮ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡ್ತಾರೆ. ಮೂರನೇ ಚಿತ್ರಕ್ಕೆ ಡಾ. ರಾಜ್ ಕುಮಾರ್ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲಾ ವಿಷ್ಣುರ್ಧನ್, ಅಂಬರೀಷ್, ರವಿಚಂದ್ರನ್ ಹೀಗೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಊರ್ವಶಿ ಕೂಡ ಮಲಯಾಳಂನ ನಟಿ ಅನ್ನೋದು ವಿಶೇಷ.
ಇನ್ನು ಜನುಮದ ಜೋಡಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಲಯಾಳಂ ನಟಿ ಶಿಲ್ಪಾ. ಚೊಚ್ಚಲ ಚಿತ್ರದಲ್ಲೇ ರಾಜ್ಯ ಪ್ರಶಸ್ತಿ ಪಡೆದ ಶಿಲ್ಪಾ ಮೂಲತಃ ಮಲಯಾಳಂ ನಟಿ. ಕನ್ನಡದವರ ತರ ಇದ್ದ ಶಿಲ್ಪಾ ಕನ್ನಡದಲ್ಲಿ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜಾಕಿ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಮಲಯಾಳಂ ಸುಂದರಿ ಭಾವನ ಮೆನನ್. ಪವರ್ ಸ್ಟಾರ್ ಜೊತೆ ಎರಡು ಸಿನಿಮಾ ಮಾಡಿದ್ದಾರೆ. ಅಲ್ಲದೆ ಶಿವರಾಜ್ ಕುಮಾರ್, ಸುದೀಪ್, ಗಣೇಶ್ ಜೊತೆ ರೊಮ್ಯಾನ್ಸ್ ಮಾಡಿರುವ ಭಾವನಾ ಕೂಡ ಕನ್ನಡದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.