ಕರ್ನಾಟಕ

karnataka

ETV Bharat / sitara

ಖ್ಯಾತ ಮಲಯಾಳಂ ನಟಿ ಶರಣ್ಯ ಶಶಿ ನಿಧನ - ಮಲಯಾಳಂನ ಖ್ಯಾತ ನಟಿ ಶರಣ್ಯ ಶಶಿ

ಕಿರುತೆರೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದ ಖ್ಯಾತ ಮಲಯಾಳಂನ ನಟಿ ಶರಣ್ಯ ಶಶಿ ಕೇವಲ 35ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

Malayalam actress Saranya
Malayalam actress Saranya

By

Published : Aug 9, 2021, 7:54 PM IST

ತಿರುವನಂತಪುರಂ(ಕೇರಳ):ಮಲಯಾಳಂನ ಖ್ಯಾತ ನಟಿ ಶರಣ್ಯ ಶಶಿ 35ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿದ್ದ ನಟಿ ಈಗಾಗಲೇ ಅನೇಕ ಸಲ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಇಂದು ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.

ಬ್ರೈನ್ ಟ್ಯೂಮರ್​ ಮಧ್ಯೆ ಕೋವಿಡ್​ ಸೋಂಕಿಗೊಳಗಾಗಿದ್ದ ನಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಆದರೆ, ಮತ್ತೊಮ್ಮೆ ಅನಾರೋಗ್ಯಕ್ಕೊಳಗಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದು, ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. 2012ರಲ್ಲಿ ಬ್ರೈನ್​ ಟ್ಯೂಮರ್​ಗೆ ಒಳಗಾಗಿದ್ದ ನಟಿಗೆ ಇಲ್ಲಿಯವರೆಗೆ ಒಟ್ಟು 11 ಶಸ್ತ್ರಚಿಕಿತ್ಸೆಗಳಾಗಿದ್ದವು. ಕೋವಿಡ್ ಸೋಂಕಿಗೊಳಗಾದ ಬಳಿಕ ಚೇತರಿಸಿಕೊಂಡಿದ್ದ ಅವರಿಗೆ ಮತ್ತೆ ಅನಾರೋಗ್ಯದ ತೊಂದರೆ ಆರಂಭಗೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ನಟಿ ಸಾವಿಗೆ ಕಂಬನಿ ಮಿಡಿದ ಅನೇಕರು

ಮಲಯಾಳಂನ ಚಕ್ಕೋರಂದಮನ್ ಮತ್ತು ಚೋಟಾ ಮುಂಬೈ ಚಿತ್ರಗಳಲ್ಲಿ ನಟನೆ ಮಾಡಿದ್ದಳು. ಇದರ ಜೊತೆಗೆ ಅನೇಕ ಟಿವಿ ಧಾರಾವಾಹಿಗಳಲ್ಲಿ ಇವರು ನಟನೆ ಮಾಡಿ, ಜನಪ್ರೀಯರಾಗಿದ್ದರು. ನಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​​, ಕಳೆದ ಕೆಲ ವರ್ಷಗಳಿಂದ ರೋಗಗಳೊಂದಿಗೆ ಹೋರಾಟ ನಡೆಸಿರುವ ನಟಿ ಇಂದು ನಿಧನರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ಸಾವಿನ ನೋವು ತಡೆದುಕೊಳ್ಳುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ. ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿದ್ದ ನಟಿ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿರಿ: ತವರಿಗೆ ಮರಳಿದ ಒಲಿಂಪಿಕ್ಸ್​ ವಿಜೇತರು..ಅದ್ಧೂರಿಯಾಗಿ ಸ್ವಾಗತಿಸಿದ ತೇಜಸ್ವಿ ಸೂರ್ಯ

ಶರಣ್ಯ ಮಲಯಾಳಂನ ಕಿರುತೆರೆಯಲ್ಲಿ ಅಪಾರ ಪ್ರಮಾಣದ ಅಭಿಮಾನ ಬಳಗ ಹೊಂದಿದ್ದಾಳೆ. ಮಂತರಕೋಡಿ, ಸೀತಾ ಹಾಗೂ ಹರಿಚಂದ್ರನಮ್​ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದು, ಕೆಲವೊಂದು ಸಿನಿಮಾಗಳಲ್ಲಿ ಸಹಾಯಕ ಪಾತ್ರ ಸಹ ನಿರ್ವಹಿಸಿದ್ದಾರೆ.

ABOUT THE AUTHOR

...view details