ನವ ನಿರ್ದೇಶಕ ಉದಯ ಪ್ರಸನ್ನ ನಿರ್ದೇಶನದ "ಮಹಿಷಾಸುರ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರ ಜೊತೆ ದುಡಿದಿರುವ ನಿರ್ದೇಶಕ ಉದಯ ಪ್ರಸನ್ನ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ " ಮಹಿಷಾಸುರ " ಚಿತ್ರದ ಮೂಲಕ
ಬರುತ್ತಿದ್ದಾರೆ.
ಮಹಿಷಾಸುರ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ತನ್ನ ಪ್ರೀತಿಯ ಮೇಲೆ ವಕ್ರ ದೃಷ್ಟಿ ಬೀರಿದ ರಾಕ್ಷಸನನ್ನು ಮಟ್ಟ ಹಾಕಲು ನಾಯಕ ಮಹಿಷಾಸುರನ ರೀತಿ ಉಗ್ರ
ರೂಪ ತಾಳುತ್ತಾನೆ. ಅದೇ ಕಾರಣಕ್ಕೆ ನಿರ್ದೇಶಕ ಉದಯ್ ಪ್ರಸನ್ನ ಈ ಚಿತ್ರಕ್ಕೆ" ಮಹಿಷಾಸುರ" ಎಂದು ಟೈಟಲ್ ಇಟ್ಟಿದ್ದಾರೆ.
ಇನ್ನು ಚಿತ್ರದಲ್ಲಿ ಇಬ್ಬರು ನಾಯಕರಿದ್ದು ನವ ನಟರಾದ ಮಂಜು ಹಾಗೂ ಸುದರ್ಶನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಚಿತ್ರಕ್ಕೆ ಬಿಂದು ನಾಯಕಿಯಾಗಿ ನಟಿಸಿದ್ದು, ತುಷಾರ್, ಸಚಿನ್, ಶ್ರೀನಿವಾಸ್ ಆಚಾರಿ, ಹುಂಡ್ರಳ್ಳಿ ವೆಂಕಟೇಶ್ ಸೇರಿದಂತೆ ಅನೇಕ ಹಿರಿಯ-ಕಿರಿಯ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇನ್ನು ಚಿತ್ರಕ್ಕೆ ರಾಘವೇಂದ್ರ ವೇಣು ಸಂಗೀತ ನೀಡಿದ್ದಾರೆ. ಲೀಲಾವತಿ ಸುರೇಶ್ ಕುಮಾರ್ ಹನುಮನಹಳ್ಳಿ ಬಂಡವಾಳ ಹೂಡಿದ್ದು ಸದ್ಯ ಮಹಿಷಾಸುರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅಲ್ಲದೆ ಈ ಚಿತ್ರದ ತೆಲುಗು, ತಮಿಳು, ಹಿಂದಿ ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಹೊಸ ನಿರ್ದೇಶಕನ ಚಿತ್ರವೊಂದು ಪರಭಾಷೆಗೆ ಹಾರಲಿದೆ.