ಟಾಲಿವುಡ್ನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜತೆ ನಟಿಸಲು ಅವಕಾಶ ನೀಡುವುದಾಗಿ ಹೇಳಿದ್ದ ನಿರ್ದೇಶಕ, ಇದಕ್ಕಾಗಿ ಸೆಕ್ಷುವಲ್ ಫೇವರ್ ಕೇಳಿದ್ದ ಎಂದು ಶಮ್ಮು ಆರೋಪಿಸಿದ್ದಾರೆ. ಇತ್ತೀಚಿಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜತೆ ಮಾತಾಡುತ್ತಿದ್ದ ವೇಳೆ ಈ ಕರಾಳ ವಿಚಾರ ಬಿಚ್ಚಿಟ್ಟಿದ್ದಾರೆ.
ಆಫರ್ ಕೊಟ್ಟು, ಮಂಚಕ್ಕೆ ಕರೆದನಂತೆ ನಿರ್ದೇಶಕ! ನಟಿ ಆರೋಪ
ಕಾಲಿವುಡ್ ನಟಿ ಶಮ್ಮು, ವಿಜಯ್ ದೇವರಕೊಂಡ ಅವರ ಸಿನಿಮಾ ನಿರ್ದೇಶಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಅಭಿಮಾನಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಜನಪ್ರಿಯ ನಿರ್ದೇಶಕನೋರ್ವ ನನಗೆ ಕರೆ ಮಾಡಿದ್ದ. ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ನಿನ್ನನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದ. ಇದಕ್ಕೆ ಪ್ರತಿಯಾಗಿ ನನ್ನ ಆಸೆಗಳನ್ನು ಈಡೇರಿಸಬೇಕೆಂದು ಪರೋಕ್ಷವಾಗಿ ಮಂಚಕ್ಕೆ ಕರೆದಿದ್ದ ಎಂದಿದ್ದಾರೆ. ಆದರೆ, ಆ ನಿರ್ದೇಶಕ ಯಾರು? ಅದು ಯಾವ ಸಿನಿಮಾ ಎಂಬುದನ್ನು ರಿವೀಲ್ ಮಾಡಿಲ್ಲ.
ಸದ್ಯ ಟಾಲಿವುಡ್ನಲ್ಲಿ ಶಮ್ಮು 'ಮೀಟೂ' ಆರೋಪ ಸಂಚಲನ ಮೂಡಿಸಿದೆ. ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ, ತಮ್ಮ ಹೆಸರು ಬಳಸಿಕೊಂಡಿರುವ ಬಗ್ಗೆ ಈವರೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿಲ್ಲ.