ಕೆಲವು ನಟರು ತಮ್ಮ ಅಭಿಮಾನಿಗಳನ್ನು ಸ್ವಂತ ಮನೆಯವಂತೆ ಟ್ರೀಟ್ ಮಾಡುತ್ತಾರೆ. ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಬಾಲಿವುಡ್ ನಟ ಸೋನುಸೂದ್ ತಮ್ಮ ಮಹಿಳಾ ಅಭಿಮಾನಿಯ ಮದುವೆಗಾಗಿ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಶ್ರೀಲಂಕಾಗೆ ಹೋಗಿ ಬಂದಿದ್ದರು.
ಅಭಿಮಾನಿ ನಿಧನಕ್ಕೆ ಕಂಬನಿ ಮಿಡಿದ ಸುದೀಪ್: ಟ್ವಿಟ್ಟರ್ ಮೂಲಕ ಸಂತಾಪ
ತುಮಕೂರಿನ ತಮ್ಮ ಅಭಿಮಾನಿಯೊಬ್ಬರ ನಿಧನಕ್ಕೆ ನಟ ಸುದೀಪ್ ಕಂಬನಿ ಮಿಡಿದಿದ್ದಾರೆ. ಪುನೀತ್ ಆರ್ಯ ಎಂಬ ಅಭಿಮಾನಿ ಇಂದು ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರೊಂದಿಗಿನ ಫೋಟೋವನ್ನು ಸುದೀಪ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಆತನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಕೂಡಾ ಇತ್ತೀಚೆಗೆ ತಮ್ಮ ಮ್ಯಾನೇಜರ್ ನಿಧನಕ್ಕೆ ಕಂಬನಿ ಮಿಡಿದು ಫೇಸ್ಬುಕ್ನಲ್ಲಿ ಮ್ಯಾನೇಜರ್ ಜೊತೆಗೆ ಇರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಕಿಚ್ಚ ಸುದೀಪ್ ಕೂಡಾ ತಮ್ಮ ಅಭಿಮಾನಿಯೊಬ್ಬರ ನಿಧನಕ್ಕೆ ಕಂಬನಿ ಮಿಡಿದು ತಮ್ಮೊಂದಿಗಿರುವ ಆತನ ಫೋಟೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತುಮಕೂರಿನ ಪುನೀತ್ ಆರ್ಯ ಎಂಬ ಯುವಕ ಇಂದು ಬೈಕ್ ಅಪಘಾತದಲ್ಲಿ ಮೃತರಾಗಿದ್ದು, ವಿಷಯ ತಿಳಿದ ಸುದೀಪ್ ಬೇಸರಗೊಂಡಿದ್ದಾರೆ.
'ಪುನೀತ್ ಸಾವಿನ ಸುದ್ದಿ ಕೇಳಿ ಬಹಳ ಶಾಕ್ ಆಯಿತು. ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹಳ ವರ್ಷಗಳಿಂದ ಆತ ನನಗೆ ಅಭಿಮಾನಿಯಾಗಿ ಹಾಗೂ ಸ್ವಂತ ತಮ್ಮನಂತೆ ಇದ್ದ. ಅವನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಪೋಸ್ಟ್ ಹಾಕಿದ್ದಾರೆ. ಕಿಚ್ಚ ಅಭಿಮಾನಿ ಸಂಘದ ಸದ್ಯಸರು ಕೂಡಾ ಪುನೀತ್ಆರ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.