ನಿನ್ನೆಯಷ್ಟೆ ರಿಲೀಸ್ ಆಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ'ಚಿತ್ರದ ಪೋಸ್ಟರ್ ಬಗ್ಗೆ ಗುಮಾನಿಯೊಂದು ಹರಿದಾಡುತ್ತಿದೆ. ಇದು ಹಿಂದಿಯ 'ಫಟಾ ಪೋಸ್ಟರ್ ನಿಕ್ಲಾ ಹೀರೋ' ಚಿತ್ರದ ಪೋಸ್ಟರ್ ಹೋಲುವಂತಿದ್ದು,ಇದನ್ನೇ ಚಿತ್ರತಂಡ ಕಾಪಿ ಮಾಡಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ನಡುವೆ ರಕ್ಷಿತ್ ಶೆಟ್ಟಿಗೆ ವಿಶ್ ಮಾಡಿರುವ ತರುಣ್ ಸುಧೀರ್, 'ಫಟಾ ಪೋಸ್ಟರ್ ನಿಕ್ಲಾ ಹೀರೋ, ಲವ್ಲಿ ಪೋಸ್ಟರ್ ರಕ್ಷಿತ್ ಶೆಟ್ಟಿ. ಹುಟ್ಟುಹಬ್ಬದ ಶುಭಾಶಯಗಳು ಬ್ರೋ'. ಈ ವರ್ಷ ನಿಮಗೆ ಗ್ರ್ಯಾಂಡ್ ಸಕ್ಸಸ್ ಸಿಗಲಿ ಎಂದು ಹಾರೈಸಿದ್ದಾರೆ.
ಇವರ ಟ್ವಿಟ್ಲ್ಲಿರುವ 'ಫಟಾ ಪೋಸ್ಟರ್ ನಿಕ್ಲಾ ಹೀರೋ ' ಪದವನ್ನು ಉದ್ದೇಶಪೂರ್ವಕವಾಗಿ ಸೇರಿಸಿ, ರಕ್ಷಿತ್ ಶೆಟ್ಟಿಯನ್ನು ಕಿಚಾಯಿಸಿದ್ದಾರೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ. ಹಾಗೇ ನೋಡಿದ್ರೆ 2013 ರಲ್ಲಿ ತೆರೆಕಂಡಿದ್ದ ರಕ್ಷಿತ್ ಶೆಟ್ಟಿ ಅಭಿನಯದ ಉಳಿದವರ ಕಂಡಂತೆ ಚಿತ್ರದಲ್ಲಿಯೇ ಈ ಡೈಲಾಗ್ ಇದೆ.