ಕರ್ನಾಟಕ

karnataka

ETV Bharat / sitara

'ಕೆಜಿಎಫ್: ಚಾಪ್ಟರ್ 2' ಚಿತ್ರದ ಟ್ರೈಲರ್ ಬಿಡುಗಡೆ: ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್​ - sanjay dutt

ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

KGF Chapter 2 movie trailer released
'ಕೆಜಿಎಫ್: ಚಾಪ್ಟರ್ 2' ಚಿತ್ರದ ಟ್ರೈಲರ್ ಬಿಡುಗಡೆ

By

Published : Mar 27, 2022, 7:15 PM IST

ಬೆಂಗಳೂರು:ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಕಿಂಗ್ ಸ್ಟಾರ್' ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಜಿಎಫ್-2 ಪ್ಯಾನ್ ಇಂಡಿಯಾ ಟ್ರೈಲರ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ.

ಅದ್ಧೂರಿ ಕಾರ್ಯಕ್ರಮದಲ್ಲಿ ಪರಭಾಷಾ ಕಲಾವಿದರು ಕೂಡ ಭಾಗವಹಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರತ್ಯೇಕ ಟ್ರೈಲರ್​ಗಳು ರಿಲೀಸ್​ ಆಗಿವೆ. ಹೊಂಬಾಳೆ ಫಿಲ್ಮಂಸ್​ ಯೂಟ್ಯೂಬ್​ ಚಾನಲ್​ನಲ್ಲಿ ಈ ಎಲ್ಲ ಟ್ರೈಲರ್​ಗಳನ್ನು ಹಂಚಿಕೊಳ್ಳಲಾಗಿದೆ. ಬಿಡುಗಡೆಯಾದ ಕೆಲ ಕ್ಷಣಗಳಲ್ಲೇ ಟ್ರೈಲರ್​ಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಅಭಿಮಾನಿಗಳು ಲೈಕ್​, ಕಾಮೆಂಟ್​ಗಳ ಸುರಿಮಳೆಗರೆಯುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​, ಚಿತ್ರದ ಹೀರೋ ರಾಕಿಂಗ್​ ಸ್ಟಾರ್​​ ಯಶ್, ನಿರ್ಮಾಪಕ ವಿಜಯ್ ಕಿರಂಗದೂರ್, ನಟ ಶಿವರಾಜ್ ಕುಮಾರ್, ಬಾಲಿವುಡ್ ನಟ ಸಂಜಯ್ ದತ್, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್, ನಟ ಪೃಥ್ವಿರಾಜ್, ಅನಿಲ್ ತಾದಾನಿ, ನಟಿ ರವೀನಾ ಟೆಂಡನ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.

ಇದನ್ನೂ ಓದಿ:ರಾಜ್​​ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಅಪ್ಪು ಫೋಟೋ ಮುಂದೆ ಕ್ಷಮೆ ಕೇಳಿದ ವ್ಯಕ್ತಿ

ABOUT THE AUTHOR

...view details