ಕರ್ನಾಟಕ

karnataka

ETV Bharat / sitara

ಶೋ ಮುಗಿದ್ಮೇಲೂ ನಿಲ್ಲಲಿಲ್ಲ ಆ್ಯಂಡಿ ಆಟ... ಸಹ ಸ್ಪರ್ಧಿ ವಿರುದ್ಧ ದೂರು ನೀಡಿದ್ರು ಕವಿತಾ ಗೌಡ - newskannada

ಬಿಗ್​ಬಾಸ್​ ಸಹ ಸ್ಪರ್ಧಿ ಆ್ಯಂಡಿ ವಿರುದ್ಧ ಕಿರುತೆರೆ ನಟಿ ಕವಿತಾ ಗೌಡ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. ಆತನ ವಿರುದ್ಧ ಮಾನಸಿಕ ಹಾಗೂ ದೈಹಿಕ‌ ಕಿರುಕುಳದ ನೀಡಿರುವ ಆರೋಪದಲ್ಲಿ ದೂರು ನೀಡಿದ್ದಾರೆ.

ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು​

By

Published : Feb 11, 2019, 5:06 PM IST

Updated : Feb 11, 2019, 6:23 PM IST

ಇಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಭಾಯಿ ಭೇಟಿ ಮಾಡಿರುವ ಕವಿತಾಗೌಡ, ಆ್ಯಂಡಿ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಮಾಧ್ಯಮಗಳ ಎದುರು ಮಾತನಾಡಿರುವ ಅವರು, ಆ್ಯಂಡಿ ಬಿಗ್ ಬಾಸ್ ಮುಗಿದ ನಂತರ ಮಜಾ ಟಾಕೀಸ್​​ನಲ್ಲಿ ನಮ್ಮ ಬಗ್ಗೆ ಮಾತನಾಡಿದ್ದು ಬೇಸರ ತರಿಸಿದೆ. ಬಿಗ್​ಬಾಸ್​ ಮನೆಯಲ್ಲಿಯೂ ಆತ ತೊಂದರೆ ಕೊಟ್ಟಿದ್ದಾನೆ. ಸೂಪರ್ ಹೀರೋ, ಸೂಪರ್ ವುಮೆನ್ ಟಾಸ್ಕ್​​​ನಲ್ಲಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಶೋನ ಎಲ್ಲ ಎಪಿಸೋಡ್​ಗಳನ್ನು ನೋಡಿದ್ರೆ ಆತನ ತಪ್ಪುಗಳು ಬಹಿರಂಗವಾಗುತ್ತವೆ. ಅವನಿಂದ ತುಂಬಾ ಹಿಂಸೆಯಾಗಿದೆ. ನನ್ನಂತೆ ಬೇರೆ ಹುಡಗಿಯರಿಗೂ ತೊಂದರೆ ಆಗಿದೆ. ಆದ್ರೆ, ಅವರು ದೂರು ನೀಡುವ ನಿರ್ಧಾರ ತೆಗೆದುಕೊಂಡಿಲ್ಲ.

ಬಿಗ್​ಬಾಸ್​​ ಶೋ ಮುಗಿದ ಮೇಲೆ ಕೂಡ ಆ್ಯಂಡಿ ಎಲ್ಲಕಡೆ ಅವಾಚ್ಯವಾಗಿ ಮಾತನಾಡಿದ್ದಾನೆ. ಮೈಕ್ ಹಿಡಿದುಕೊಂಡು ಎಲ್ಲರಿಗೂ ಬೈದಿದ್ದಾನೆ. ನಾನು ಈಗ ದೂರು ನೀಡಿ ನ್ಯಾಯ ಕೇಳುತ್ತಿದ್ದೇನೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಸ್ವಲ್ಪ ಸಮಯ ತೆಗೆದುಕೊಂಡು ದೂರು ನೀಡುತ್ತಿದ್ದೇನೆ ಎಂದು ಕವಿತಾ ಗೌಡ ಹೇಳಿದ್ರು.

ಇನ್ನು ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗಲಕ್ಷ್ಮಿ, ಕವಿತಾ ಗೌಡ ಅವರ ದೂರು ತೆಗೆದುಕೊಂಡಿ ದ್ದೇವೆ. ಬಿಗ್​ಬಾಸ್​ ಮೇಲ್ವಿಚಾರಕ ಗುರುರಾಜ್ ಶೆಣೈ ಅವರನ್ನು ಸಾಕ್ಷಿಯನ್ನಾಗಿ ಮಾಡಿ ಆ್ಯಂಡಿ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇವರಿಬ್ಬರನ್ನು ವಿಚಾರಣೆಗೆ ಕರೆಯುತ್ತೇವೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದು, ಸಾಬೀತಾದ್ರೆ ಅದು ಲೈಂಗಿಕ ಕಿರುಕಳ ಎಂದು ಪರಿಗಣಿಸಲ್ಪಡುತ್ತದೆ. ಶೋ ನಡೆಯುವ ಸಮಯದಲ್ಲಿ ಆ್ಯಂಡಿ ಬಗ್ಗೆ ಸಾಕಷ್ಟು ಸಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲವಂತೆ. ಈ ಎಲ್ಲರ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದರು.

Last Updated : Feb 11, 2019, 6:23 PM IST

ABOUT THE AUTHOR

...view details