ನವ ನಿರ್ದೇಶಕ ಕಿರಣ್ ಸೂರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ. ಒಳಾಂಗಣ ಚಿತ್ರೀಕರಣವನ್ನು ಮುಗಿಸಿದ ಚಿತ್ರತಂಡ ಔಟ್ಡೋರ್ ಶೂಟಿಂಗ್ ಮಾತ್ರ ಬಾಕಿ ಉಳಿಸಿತ್ತು. ಇನ್ನೇನು ಚಿತ್ರತಂಡ ಔಟ್ಡೋರ್ ಶೂಟಿಂಗ್ ಶುರು ಮಾಡಬೇಕು ಎನ್ನುವಷ್ಟರಲ್ಲಿ ಕೊರೊನಾ ಚಿತ್ರದ ಶೂಟಿಂಗ್ಗೆ ಬ್ರೇಕ್ ಹಾಕಿತು.
ಸದ್ಯ ಸರ್ಕಾರ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಕಾರಣ ಮತ್ತೆ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಹೊರಾಂಗಣ ಚಿತ್ರೀಕರಣ ಬಾಕಿ ಇರುವ ಕಾರಣ ಚಿತ್ರವನ್ನು ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ನಿರ್ದೇಶಕ ಕಿರಣ್ ಸೂರ್ಯ ಪ್ಲಾನ್ ಮಾಡಿದ್ದಾರೆ. ನಾಯಕ ಅಭಿಮನ್ಯು ಜೊತೆ ಬುಲೆಟ್ ಏರಿ ಮಲೆನಾಡ ಮಡಿಲಲ್ಲಿ ಲೊಕೇಶನ್ ಹುಡುಕೊದರಲ್ಲಿ ಬ್ಯುಸಿಯಾಗಿದ್ದಾರೆ.
ಶೂಟಿಂಗ್ಗಾಗಿ ಲೊಕೇಶನ್ ಹುಡುಕಲು ಬುಲೆಟ್ ಏರಿ ಮಲೆನಾಡಿಗೆ ಹೊರಟ ಕಾಶಿನಾಥ್ ಪುತ್ರ ಹೌದು, ನಟ ಅಭಿಮನ್ಯು ತಾನೊಬ್ಬ ಹಿರೋ ಅನ್ನೋ ಅಹಂ ತೋರದೆ ಬುಲೆಟ್ನಲ್ಲಿ ಹೊರಟು ಲೊಕೇಶನ್ ಹುಡುಕುತಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು ಸುತ್ತಮುತ್ತ ಬುಲೆಟ್ನಲ್ಲಿ ಒಡಾಡಿಕೊಂಡು ಪ್ರಕೃತಿ ಸೌಂದರ್ಯ ಸವಿದು, ಮಳೆಯನ್ನೂ ಲೆಕ್ಕಿಸದೆ ಚಿತ್ರದ ಶೂಟಿಂಗ್ಗಾಗಿ ಲೊಕೇಶನ್ ಹುಡುಕುತ್ತಿದ್ದಾರೆ.
ವಿಶೇಷ ಅಂದ್ರೆ ನಿರ್ದೇಶಕ ಕಿರಣ್ ಸೂರ್ಯ ಹಾಗೂ ಅಭಿಮನ್ಯು ಕಾಶಿನಾಥ್ ಇಬ್ಬರೇ ಬೆಂಗಳೂರಿನಿಂದ ಬುಲೆಟ್ನಲ್ಲಿ ಶಿವಮೊಗ್ಗಕ್ಕೆ ಹೊರಟು ಅಲ್ಲಿ ಒಂದಷ್ಟು ಸ್ನೇಹಿತರ ಜೊತೆಗೂಡಿ ಚಿತ್ರದ ಲೊಕೇಶನ್ ಹುಡುಕುತ್ತಿದ್ದಾರೆ.
ಒಟ್ಟಿನಲ್ಲಿ ಹೊಸ ಹುರುಪಿನ ಯುವಕರ ತಂಡ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ಸಂಪೂರ್ಣ ಎಫರ್ಟ್ ಹಾಕಿ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರವನ್ನು ಮಾಡುತ್ತಿದೆ. ಈ ಚಿತ್ರಕ್ಕೆ ಯಂಗ್ ಅಂಡ್ ಎನರ್ಜಿಟಿಕ್ ನಂದೀಶ್ ಎಂ.ಸಿ. ಗೌಡ ಸಾಥ್ ನೀಡಿದ್ದು, ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸ್ಫೂರ್ತಿ ಉಡಿಮನೆ ಅಭಿಮನ್ಯು ಜೊತೆ ಸ್ಕ್ರೀನ್ ಶೇರ್ಮಾಡ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು, ವಿಜಯಶ್ರೀ, ಗಣೇಶ್ ನಾರಾಯಣ್, ರವಿಕುಮಾರ್, ದೇವು ರಂಗಭೂಮಿ, ಶೋಭಾ, ಕಿಶೋರ್, ಅಶ್ವಿನಿ ಮುಂತಾದವರು ಬಣ್ಣ ಹಚ್ಚಿದ್ದಾರೆ.