ಹೈದರಾಬಾದ್: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅಂಡ್ ಫ್ಯಾಮಿಲಿ ಸದ್ಯ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದೆ. ಎರಡನೇ ಮಗ ಜೆಹ್ಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ ಕರೀನಾ ಹಾಗೂ ಸೈಫ್.
ಈ ಕುರಿತು ಕರೀನಾ ಪೋಸ್ಟೊಂದನ್ನು ಹಂಚಿಕೊಂಡಿದ್ದು, ಮಗನಿಗೆ ಶುಭ ಹಾರೈಸಿದ್ದಾರೆ. ‘ಪ್ರೀತಿ, ಖುಷಿ ಮತ್ತು ಧೈರ್ಯ ಎಂದೆಂದಿಗೂ ನಿನ್ನಲ್ಲಿರಲಿ, ನನ್ನ ಜೀವಕ್ಕೆ 6 ತಿಂಗಳ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಕರೀನಾ ಮಾಲ್ಡೀವ್ಸ್ಗೆ ತನ್ನ ಹಿರಿಯ ಮಗ ತೈಮೂರ್ ಮತ್ತು ನಟ - ಪತಿ ಸೈಫ್ ಅಲಿ ಖಾನ್ ಅವರ 51 ನೇ ಹುಟ್ಟುಹಬ್ಬದ ಹಿನ್ನೆಲೆ ಆ ಸಂತೋಷವನ್ನು ಸಂಭ್ರಮಿಸಲು ತೆರಳಿದ್ದಾರೆ. ವಶನಿವಾರ, ಬೆಬೊ ಇನ್ಸ್ಟಾಗ್ರಾಮ್ನಲ್ಲಿ ಕಿರಿಯ ಮುದ್ದು ಮಗ ಜೆಹ್ ಜೊತೆಗಿನ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಜೆಹ್ ಜೊತೆ ಕರೀನಾ ಕಪೂರ್ ಖಾನ್ ಸೈಫ್ ಮತ್ತು ಕರೀನಾ ಅವರನ್ನು ತಮ್ಮ ಅಭಿಮಾನಿಗಳು ಪ್ರೀತಿಯಿಂದ 'ಸೈಫೀನಾ' ಎಂದೇ ಕರೆಯುತ್ತಾರೆ. 2012 ರಲ್ಲಿ ವಿವಾಹವಾದ ಈ ದಂಪತಿಗೆ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಕರೀನಾ ಮತ್ತು ಸೈಫ್ ಅವರ ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರಿಸಲಾಯಿತು ಎಂದು ವರದಿಗಳು ಪ್ರಸಾರವಾದಾಗ ಈ ದಂಪತಿ ಸಾಕಷ್ಟು ಅಹಿತಕರ ಟ್ರೋಲ್ಗೆ ಒಳಗಾಗಬೇಕಾಯ್ತು. ಆದರೆ, ಬಾಲಿವುಡ್ ನ ಈ ಕಪಲ್ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಕರೀನಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ನಟಿಸಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಅವರು ವೆಬ್ ಸಿರೀಸ್, ಅನೇಕ ಸಿನಿಮಾಗಳು ಸೇರಿದಂತೆ ಹಲವಾರು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.