ಕರ್ನಾಟಕ

karnataka

ETV Bharat / sitara

ನೆರೆ ಪರಿಹಾರಕ್ಕೆ ಉಪ್ಪಿಯಿಂದ 5 ಲಕ್ಷ: ಭರಾಟೆ ಆಡಿಯೋ ಲಾಭದ ಹಣ ನೆರವಿಗೆ ನೀಡಲು ತಂಡ ನಿರ್ಧಾರ

ಮಹಾ ಮಳೆಯಿಂದ ಇಡೀ ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದೆ. ಈ ಜಲ ಪ್ರಳಯದಿಂದ ಅಲ್ಲಿನ ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನ ತಾರೆಯರು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಸುದೀಪ್, ದರ್ಶನ್, ಗಣೇಶ್, ತಾರ ಅನುರಾಧ ಹಾಗು ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ಪ್ರಮುಖರು ಸಂತ್ರಸ್ತರಿಗೆ ಸಹಾಯ‌‌‌‌ ಮಾಡಿ ಅಂತಿದ್ದಾರೆ.

By

Published : Aug 8, 2019, 9:32 PM IST

ಉ.ಕ ಪರ ನಿಂತ ಚಂದನವನ

ಮಹಾ ಮಳೆಯಿಂದ ಇಡೀ ಉತ್ತರ ಕರ್ನಾಟಕ ನಲುಗಿದೆ. ಈ ಜಲ ಪ್ರಳಯದಿಂದ ಅಲ್ಲಿನ ಜನರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನ ತಾರೆಯರು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಸುದೀಪ್, ದರ್ಶನ್, ಗಣೇಶ್, ತಾರ ಅನುರಾಧ ಹಾಗು ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ಪ್ರಮುಖರು ಸಂತ್ರಸ್ತರಿಗೆ ಸಹಾಯ‌‌‌‌ ಮಾಡಿ ಅಂತಿದ್ದಾರೆ.

ಲಾಭದ ಹಣ ಕೊಡಲು ಭರಾಟೆ ತಂಡ ನಿರ್ಧಾರ

ಈಗ ಶ್ರೀಮುರಳಿ ಸ್ವಿಡ್ಜರ್​​ರ್ಲೆಂಡ್​​​ನಿಂದ ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಮಾಡಿ ಅಂತ ವಿಡಿಯೋವೊಂದನ್ನು ಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಉತ್ತರ ಕರ್ನಾಟಕ್ಕೆ ನೆರವು ನೀಡಿ ಅಂತ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದಂಥ ಲಾಭವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಿ ನಮ್ಮ ಕೈಲಾದ ಸಹಾಯ ಮಾಡಲು ಭರಾಟೆ ಚಿತ್ರತಂಡ ಘೋಷಿಸಿದೆ.

ಇನ್ನು ಉಪೇಂದ್ರ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸಹಾಯಕ್ಕೆ, ಐದು ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಹಾಗೆ ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಹಾಗೇ ನಟಿ ಶುಭಾ ಪೂಂಜಾ ಕೂಡ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಿ ಅಂತಾ ಮನವಿ ಮಾಡಿದ್ದಾರೆ.

ABOUT THE AUTHOR

...view details