ಕರ್ನಾಟಕ

karnataka

ETV Bharat / sitara

ಚಿತ್ರರಂಗ ಶ್ರೀಮಂತಗೊಳಿಸಿದ ನಿರ್ದೇಶಕ ಇಂದು ಬಾಡಿಗೆ ಮನೆಯಲ್ಲಿ - ಎಸ್​​​​.ವಿ.ರಾಜೇಂದ್ರ ಬಾಬು

ಮುತ್ತಿನ ಹಾರ, ಬಂಧನ, ಮಹಾಕ್ಷತ್ರಿಯ ಹೀಗೆ ಸಾಕಷ್ಟು ಮಹಾ ಸಿನಿಮಾಗಳಿಗೆ ಆ್ಯಕ್ಷನ್ ಕಟ್​ ಹೇಳಿರುವ ನಿರ್ದೇಶಕ ಎಸ್​.ವಿ.ರಾಜೇಂದ್ರ ಸಿಂಗ್ ಬಾಬು ಈ ವಾರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ.

ಎಸ್​​​​.ವಿ.ರಾಜೇಂದ್ರ ಸಿಂಗ್ ಬಾಬು

By

Published : Jul 6, 2019, 7:26 PM IST

ಇವರ ತಂದೆ ದಿವಂಗತ ಶಂಕರ್ ಸಿಂಗ್ ದೊಡ್ಡ ನಿರ್ಮಾಪಕರು. ತಮ್ಮ ಮಹಾತ್ಮ ಪಿಕ್ಚರ್ಸ್​​​ ಬ್ಯಾನರ್​ನಡಿ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದವರು. ಶಂಕರ್ ಸಿಂಗ್ ಅವರ ಪತ್ನಿ ಪ್ರತಿಮಾ ದೇವಿ ಕೂಡ ಹೆಸರಾಂತ ನಟಿ. ಈ ದಂಪತಿಯ ಮಗ ರಾಜೇಂದ್ರ ಸಿಂಗ್ ಬಾಬು ಕೂಡ ಸಿನಿಮಾ ರಂಗದಲ್ಲೇ ಜೀವನ ಸವೆಸಿದವರು. ಕೇವಲ ಕನ್ನಡ ಮಾತ್ರವಲ್ಲ ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಖ್ಯಾತನಾಮರಾದವರು. ಇವರ ನಿರ್ದೇಶನದ ನಾಗರಹೊಳೆ, ಅಂತ, ಸಿಂಹದ ಮರಿ ಸೈನ್ಯ, ಬಣ್ಣದ ಗೆಜ್ಜೆ ಸೇರಿದಂತೆ ಸಾಕಷ್ಟು ಚಿತ್ರಗಳು ಶತದಿನದ ಪ್ರದರ್ಶನ ಕಂಡಿವೆ.

ಹೀಗೆ ತಮ್ಮ ಸೃಜನಶೀಲತೆಯಿಂದ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿರುವ ಎಸ್​​​.ವಿ.ರಾಜೇಂದ್ರ ಸಿಂಗ್​ ಬಾಬು ಅವರದು ಸ್ವಂತ ಮನೆಯಿಲ್ಲ. ನಿರ್ಮಾಪಕರೂ ಆಗಿರುವ ಅವರು 14 ಪ್ರಾಪರ್ಟಿಗಳನ್ನು ಮಾರಿಕೊಂಡಿದ್ದಾರೆ. ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರ ಸಿನಿಮಾ ಕನಸಿಗೆ ಮಾತ್ರ ಕೊನೆಯಿಲ್ಲ. ಇಂದು ಪ್ರಸಾರವಾಗಲಿರುವ ವೀಕೆಂಡ್ ವಿಥ್​ ರಮೇಶ್ ಎಪಿಸೋಡಿನಲ್ಲಿ ತಮ್ಮ ಕೊನೆಯ ಆಸೆ ಹಂಚಿಕೊಂಡಿರುವ ಅವರು, ನಾನು ಡೈರೆಕ್ಟರ್ ಚೇರ್ ಮೇಲೆ ಕುಳಿತೆ ಕೊನೆಯುಸಿರೆಳೆಯಬೇಕು ಎಂದು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details