ಕನ್ನಡ ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಹೊಸ ಅಲೆಯನ್ನೇ ಸೃಷ್ಟಿಸಿರುವ ಜೊತೆ ಜೊತೆಯಲಿ ಧಾರಾವಾಹಿಯ 'ಜೊತೆ ಜೊತೆಯಲಿ ಜಾತ್ರೆ' ನಾಳೆ ಮಧ್ಯಾಹ್ನ ಪ್ರಸಾರವಾಗಲಿದೆ.
ಕಳೆದ ವಾರವಷ್ಟೇ ಚಿತ್ರದುರ್ಗದಲ್ಲಿ ಜೊತೆ ಜೊತೆಯಲಿ ಜಾತ್ರೆಯ ಚಿತ್ರೀಕರಣ ನಡೆದಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಧಾರಾವಾಹಿಯ ಅಭಿಮಾನಿಗಳಿಂದ 60 ಅಡಿಯ ಅನಿರುದ್ಧ್ ಹಾಗೂ ಮೇಘಾ ಶೆಟ್ಟಿಯ ಕಟೌಟ್ ನಿರ್ಮಾಣ ಮಾಡಲಾಗಿತ್ತು.
ಪ್ರೇಕ್ಷಕರ ಒತ್ತಾಯದ ಮೇರೆಗೆ ಜೊತೆ ಜೊತೆಯಲಿ ಧಾರಾವಾಹಿಯ ಜಾತ್ರೆಯನ್ನು ಚಿತ್ರದುರ್ಗದಲ್ಲಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅನಿರುದ್ಧ್ ತಮ್ಮ ಮಾವನವರಾದ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಚಿತ್ರೀಕರಣ ನಡೆದ ದುರ್ಗದ ಕೋಟೆಗೆ ಹೋಗಿದ್ದರು. ಅಲ್ಲಿ ವಿಷ್ಣುವರ್ಧನ್ ನಟಿಸಿದ ಸನ್ನಿವೇಶಗಳನ್ನು ತಾವು ಅಭಿನಯಿಸಿ ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡಿದರು.
ಇನ್ನು ಜೊತೆ ಜೊತೆಯಲಿ ಧಾರಾವಾಹಿ ನಂಬರ್ 1 ಸ್ಥಾನ ಉಳಿಸಿಕೊಂಡಿದೆ. ಧಾರಾವಾಹಿಗೆ ಅಭಿಮಾನಿಗಳು ಅಪರೂಪದ ವಿಧಾನಗಳಲ್ಲಿ ತಮ್ಮ ಪ್ರೀತಿ ತೋರುತ್ತಿದ್ದಾರೆ. ಈ ಧಾರಾವಾಹಿ ತಂಡ ನಡೆಸಿದ ಜೊತೆ ಜೊತೆಯಲಿ ಜಾತ್ರೆ ನಾಳೆ ಅಂದ್ರೆ ಡಿಸೆಂಬರ್ 29ರಂದು ಮಧ್ಯಾಹ್ನ 3 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.