ಅಭಿಷೇಕ್ ಅಂಬರೀಶ್ ನಟನೆಯ 'ಅಮರ್' ಸಿನಿಮಾದ ಮೇಲೆ ಗಾಂಧಿನಗರ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಟೀಸರ್ ಹಾಗೂ ಕೆಲ ಹಾಡುಗಳಿಂದ ಸಿನಿ ಪ್ರಿಯರ ಮನತಣಿಸಿದ್ದ ಅಮರ್ ಚಿತ್ರದಿಂದ ಮತ್ತೊಂದು ಸಿಂಗಲ್ ರಿಲೀಸ್ ಆಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಕುಣಿದಿರೋ ಕೊಡವ ಶೈಲಿಯ 'ಜೋರು ಪಾಟು ಆಟ ಆಡೋಣ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ಹಾಗೂ ಕೊಡವ ಭಾಷೆಯ ಮಿಶ್ರಣದ ಹಾಡು ಸಿಕ್ಕಾಪಟ್ಟೇ ಕಿಕ್ಕೇರಿಸುವಂತಿದೆ.
ಈ ಪಾರ್ಟಿ ಸಾಂಗ್ನಲ್ಲಿ ದರ್ಶನ್ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್, ನಿರೂಪ್ ಭಂಡಾರಿ, ರಚಿತಾ ರಾಮ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕಿರಣ್ ಕಾವೇರಪ್ಪ ಲಿರಿಕ್ಸ್ಗೆ ಅರ್ಜುನ್ ಜನ್ಯಾ ಸಂಗೀತ, ಜೆಸ್ಸಿ ಗಿಫ್ಟ್ ಕಂಠದಾನ ಮಾಡಿದ್ದಾರೆ.
ಇನ್ನು ಚಿತ್ರದಲ್ಲಿ ಅಭಿಗೆ ನಾಯಕಿಯಾಗಿ ತಾನ್ಯಾಹೋಪ್ ಜೊತೆಯಾಗಿದ್ದು, ಅತಿಥಿ ಪಾತ್ರದಲ್ಲಿ ದರ್ಶನ್ ಮಿಂಚಿಲಿದ್ದಾರೆ. ಚಿತ್ರ ಇದೇ ಮೇ.31 ರಂದು ಅಂಬರೀಶ್ ಜನ್ಮದಿನದ ಉಡುಗೊರೆಯಾಗಿ ಅಮರ್ ತೆರೆಗೆ ಬರಲಿದ್ದಾನೆ. ಈ ಚಿತ್ರಕ್ಕೆ ನಾಗಶೇಖರ್ ನಿರ್ದೇಶನವಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ.