ಕರ್ನಾಟಕ

karnataka

ETV Bharat / sitara

"ಈ ಕಾಯಿಲೆಯಿಂದ ನಾನು ಚಾಕೋಲೆಟ್​​ ತಿನ್ನುವುದನ್ನೇ ನಿಲ್ಲಿಸಿದೆ" - Kajal Agarwal

ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ನಟಿ ಕಾಜಲ್​​​​ ತಾನು 5 ವರ್ಷದವಳಾಗಿದ್ದಾಗಿನಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಕಾಜಲ್ ಅಗರವಾಲ್
ಕಾಜಲ್ ಅಗರವಾಲ್

By

Published : Feb 10, 2021, 5:09 PM IST

ಟಾಲಿವುಡ್, ಕಾಲಿವುಡ್ ಕ್ಯೂಟ್​​ ಬೆಡಗಿ ಕಾಜಲ್ ಅಗರವಾಲ್ ತಾವು ಚಿಕ್ಕ ವಯಸ್ಸಿನಿಂದ ಅನುಭವಿಸುತ್ತಿರುವ ಕಾಯಿಲೆ ಒಂದರ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಮುಕ್ತವಾಗಿ ಬರೆದುಕೊಂಡಿದ್ದಾರೆ.

ಕಾಜಲ್ ಅಗರವಾಲ್

ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ನಟಿ ಕಾಜಲ್​​​​ ತಾನು 5 ವರ್ಷದವಳಾಗಿದ್ದಾಗಿನಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಕಾಜಲ್ ಅಗರವಾಲ್

ಇನ್​​ಸ್ಟಾಗ್ರಾಮ್​​ನಲ್ಲಿ ಈ ಬಗ್ಗೆ ಬರೆದಿದ್ದು, ಏನೂ ಅರಿಯದ ಚಿಕ್ಕ ವಯಸ್ಸಿನಲ್ಲಿ ಅಸ್ತಮಾ ಕಾಣಿಸಿಕೊಂಡಿತು. ನಾನು ಇದರಿಂದ ಚಾಕೋಲೆಟ್ ಹಾಗೂ ಡೈರಿ ಪದಾರ್ಥಗಳನ್ನು ತಿನ್ನುವುದನ್ನೇ ನಿಲ್ಲಿಸಿದೆ. ಚಾಕೋಲೆಟ್​ನಿಂದ ದೂರ ಉಳಿಯುವುದು ಸುಲಭದ ಮಾತಲ್ಲ ಎಂದೂ ಹೇಳಿದ್ದಾರೆ.

ಕಾಜಲ್ ಅಗರವಾಲ್

ಇನ್ನು ನಾನು ಚಳಿಗಾಲ ಹಾಗೂ ದೂರದ ಪ್ರಯಾಣ ಮಾಡುವುದೆಂದರೆ ನನಗೆ ಕಷ್ಟಕರವಾದ ಸಂಗತಿಯಾಗಿತ್ತು. ಆದ್ರಿಂದ ನಾನು ಇನ್ ಹೇಲರ್ ಬಳಸಲು ಶುರು ಮಾಡಿದೆ, ಅವಾಗಿನಿಂದ ಅರಾಮವಾಗಿದ್ದೇನೆ ಎಂದಿದ್ದಾರೆ.

ಕಾಜಲ್ ಅಗರವಾಲ್

ಅಸ್ತಮಾ ಬಗ್ಗೆ ಹೇಳಿರುವ ನಟಿಯು, ಈ ರೋಗದ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ನಮ್ಮಲ್ಲಿ ಸಾಕಷ್ಟು ಜನ ಇನ್ ಹೇಲರ್ ಬಳಸಲು ಸಂಕೋಚ ಪಡುತ್ತಾರೆ. ಆದ್ರೆ ಅದು ತಪ್ಪು. ನಮ್ಮ ಆರೋಗ್ಯದ ಬಗ್ಗೆ ನಾವೇ ಗಮನ ಕೊಡದಿದ್ದರೆ ಹೇಗೆ ? ನಾನು ಬಾಲ್ಯದಿಂದಲೂ ಇನ್ ಹೇಲರ್ ಬಳಸುತ್ತಿದ್ದೇನೆ. ಹೊರ ಹೋಗುವಾಗ ಅದನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಕಾಜಲ್​ ಹೇಳಿದ್ದಾರೆ.

ABOUT THE AUTHOR

...view details