ಕರ್ನಾಟಕ

karnataka

ETV Bharat / sitara

ನಾನು ಪಬ್ಲಿಕ್​ ಪ್ರಾಪರ್ಟಿ ಅಲ್ಲ: ಕಾಲೆಳೆದ ಕಿಡಿಗೇಡಿಗಳ ಕಾಮೆಂಟ್​ಗೆ ಕೆಂಡ ಕಾರಿದ ನಟಿ - public property

ಸ್ಯಾಂಡಲ್​ವುಡ್​ನ 'ವಜ್ರಕಾಯ' ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ ನೆಟಿಜನ್​ಗಳ ವಿರುದ್ಧ ಕೆಂಡ ಕಾರಿದ್ದಾರೆ.

ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ

By

Published : Jun 15, 2019, 9:25 PM IST

ಇತ್ತೀಚೆಗೆ ಬೀಚ್ ವೊಂದರಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ಶುಭ್ರಾ ಅಯ್ಯಪ್ಪ ಟ್ರೋಲ್​ಗೆ ಒಳಗಾಗಿದ್ದರು. ಕೆಲವರು ಈ ದೃಶ್ಯ ಕಂಡು ಕೆಟ್ಟದಾಗಿ ಕಾಮೆಂಟ್​ ಮಾಡುವ ಮೂಲಕ ನಟಿಯ ಕಾಲೆಳೆದಿದ್ದರು. ಬಿಕಿನಿ ತೊಟ್ಟ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿತ್ತು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾಲೆಳೆದ ನಿಟ್ಟಿಗರ ವಿರುದ್ಧ ಸಿಡಿದೆದ್ದಿರುವ ಶುಭ್ರಾ ಅಯ್ಯಪ್ಪ, ಪೊಲೀಸ್​ ಮೆಟ್ಟಿಲು ಏರಿದ್ದಲ್ಲದೇ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಾಕುವ ಮೂಲಕ ಬಾಯಿ ಮುಚ್ಚಿಸಿದ್ದಾರೆ.

ಹೌದು, ನಾನು ನಟಿ, ಹೌದು ನಾನು ಮಾಡೆಲ್​ ಸಾರ್ವಜನಿಕ ಜೀವನದಲ್ಲಿರುವಂಥದ್ದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ನಾನು ಸಾರ್ವಜನಿಕ ಸ್ವತ್ತಲ್ಲ ಎಂದು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಹರಕು-ಮುರುಕು ಕಾಮೆಂಟ್​ಗೆ ಟಾಂಗ್​ ಕೊಟ್ಟಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬಿಕಿನಿ ತೊಟ್ಟ ವಿಡಿಯೋಗೆ ಕೆಲ ಕಿಡಿಗೇಡಿಗಳು ಆಕೆಯ ಕೆಲವು ಹಾಟ್ ಪೋಟೋಗಳನ್ನು ಜೋಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದರು.

ಕಿಡಿಗೇಡಿಗಳು ಎಸಗಿದ ಈ ಕೃತ್ಯಕ್ಕೆ ಕೆಂಡಮಂಡಲರಾಗಿರುವ ಶುಭ್ರಾ ಅಯ್ಯಪ್ಪ, ತನ್ನ ವೈಯಕ್ತಿಕ ಜೀವನಕ್ಕೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ. 'ವಜ್ರಕಾಯ' ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ಶುಭ್ರಾ, ಸಿನಿಮಾಗಿಂತ ಹೆಚ್ಚಾಗಿ ಬೋಲ್ಡ್​ ಫೋಟೊ ಶೂಟ್​ಗಳಿಂದಲೇ ಸದ್ದು ಮಾಡುತ್ತಿದ್ದಾರೆ.

ABOUT THE AUTHOR

...view details