ಮುಂಬೈ:ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ತಮ್ಮ ಡ್ಯಾಪರ್ ಫೋಟೋವೊಂದನ್ನು ಪೋಸ್ಟ್ ಮಾಡಿ, ಅಭಿಪ್ರಾಯಕ್ಕಾಗಿ ನಟಿ ಕಿಯಾರಾ ಅಡ್ವಾಣಿಗೆ ಟ್ಯಾಗ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಹೃತಿಕ್, ಹೇ ಅಡ್ವಾಣಿ ಕಿಯಾರಾ, ಇದು ಚೆನ್ನಾಗಿದೆ ಎಂದು ನೀವು ಭಾವಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಹೃತಿಕ್ ಮತ್ತು ಕಿಯಾರಾ ಅಡ್ವಾಣಿ ಮುಂಬರುವ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.