ಕರ್ನಾಟಕ

karnataka

ETV Bharat / sitara

ಬುರ್ಜ್ ಖಲೀಫಾ ಅಲ್ಲ, ಸ್ಪೇಸ್​​​​​​​ನಲ್ಲಿ ರಿಲೀಸ್ ಆಯ್ತು 'ಹಾಸ್ಟೆಲ್ ಹುಡುಗರು' ಟೀಸರ್​​​​​​​...! - Hostel hudugaru bekagiddare

ಗುಲ್ ಮೊಹರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿರುವ 'HOSTEL ಹುಡುಗರು ಬೇಕಾಗಿದ್ದಾರೆ' ಸಿನಿಮಾ ಶೂಟಿಂಗ್ ಮುಗಿದಿದೆ. ಚಿತ್ರತಂಡ ಬಹಳ ವಿಭಿನ್ನವಾಗಿ ಪ್ರಮೋಷನ್ ಕಾರ್ಯಗಳನ್ನು ಆರಂಭಿಸಿದೆ. ಪುನೀತ್ ರಾಜ್​ಕುಮಾರ್, ಸುದೀಪ್ ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

Hostel hudugaru Bekagiddare
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

By

Published : Feb 16, 2021, 7:34 AM IST

ಫೆಬ್ರವರಿ 15 ಸಂಜೆ 6 ಗಂಟೆಗೆ 'HOSTEL ಹುಡುಗರು ಬೇಕಾಗಿದ್ದಾರೆ' ಚಿತ್ರದ ಟೀಸರನ್ನು ಬುರ್ಜ್ ಖಲೀಫಾ ಮೇಲೆ ಸುದೀಪ್ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈ ವಿಚಾರ ಕೇಳುತ್ತಿದ್ದಂತೆ ಸಿನಿಪ್ರಿಯರು ಆಶ್ಚರ್ಯ ವ್ಯಕ್ತಪಡಿಸಿದ್ದರು. 'ವಿಕ್ರಾಂತ್ ರೋಣ' ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಟೀಸರ್​​​​​​ ಬುರ್ಜ್ ಖಲೀಫಾ ಮೇಲೆ ಬಿಡುಗಡೆಯಾಗುತ್ತಿದ್ಯಾ ಎಂದು ಪ್ರಶ್ನಿಸಿದ್ದರು. ಆದರೆ ಈ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿ ಸ್ಪೇಸ್​​​ನಲ್ಲಿ ತಮ್ಮ ಸಿನಿಮಾ ಟೀಸರ್ ಬಿಡುಗಡೆ ಮಾಡಿದೆ.

ಈ ವಿಚಾರ ಓದಿದವರಿಗೆ ಕನ್ಫ್ಯೂಸ್ ಆಗುವುದು ಗ್ಯಾರಂಟಿ. ನಿಜಕ್ಕೂ 'HOSTEL ಹುಡುಗರು ಬೇಕಾಗಿದ್ದಾರೆ' ಸಿನಿಮಾ ಟೀಸರ್, ಸ್ಪೇಸ್​​ನಲ್ಲಿ ರಿಲೀಸ್ ಆಗಲು ಸಾಧ್ಯಾನಾ ಎಂದು ಯೋಚಿಸುತ್ತಿದ್ದವರು ಇದು ಪಬ್ಲಿಸಿಟಿ ಗಿಮಿಕ್ ಎಂದು ತಿಳಿದು ನಕ್ಕು ಸುಮ್ಮನಾಗಿದ್ದಾರೆ. ನಿರ್ದೇಶಕ ನಿತಿನ್​​​ ಕೃಷ್ಣಮೂರ್ತಿ ತಮ್ಮ ಕ್ರಿಯೇಟಿವಿಟಿ ಮೂಲಕ ಈ ರೀತಿ ಸಿನಿಮಾ ಪ್ರಮೋಷನ್ ಮಾಡಲು ಹೊರಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪುನೀತ್ ರಾಜ್​​ಕುಮಾರ್ ಈ ಚಿತ್ರದ ಟೈಟಲ್ ರಿಲೀಸ್ ಮಾಡಿದ್ದರು. ತೆರೆ ಮುಂದೆ ಇದೊಂದು ವರ್ಸ್ಟ್​ ಸಿನಿಮಾ ಎಂದು ಪುನೀತ್​​ ಬೈದರೂ ತೆರೆ ಹಿಂದೆ, ಚಿತ್ರತಂಡದ ಕ್ರಿಯೇಟಿವಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದ್ದರು. ಇದೀಗ ನಟ ಸುದೀಪ್ ಕೂಡಾ ಚಿತ್ರತಂಡದ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಪ್ರಮೋಷನ್​​​ಗಾಗಿ ಚಿತ್ರತಂಡ ತಯಾರಿಸಿರುವ ಮತ್ತೊಂದುವಿಡಿಯೋ ನೋಡಿದ ಸುದೀಪ್, ಇಂತಹ ಪ್ರತಿಭೆಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಿದರೆ ಕನ್ನಡಕ್ಕೆ ಒಳ್ಳೆ ಸಿನಿಮಾಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.

ನಿರ್ದೇಶಕ ನಿತಿನ್ ಕೃಷ್ಣಮೂರ್ತಿ

ಇದನ್ನೂ ಓದಿ:ಬಹಳ ವರ್ಷಗಳ ನಂತರ ದ್ವಿಪಾತ್ರದಲ್ಲಿ ಸುದೀಪ್​​​​​...ಹೊಸ ಚಿತ್ರ ಒಪ್ಪಿಕೊಂಡ್ರಾ ಕಿಚ್ಚ...?

'HOSTEL ಹುಡುಗರು ಬೇಕಾಗಿದ್ದಾರೆ' ಸಿನಿಮಾ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ತೆರೆ ಕಾಣಲಿದೆ. ಚಿತ್ರವನ್ನು ಗುಲ್​​ಮೊಹರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಶೀಘ್ರವೇ ಮಾಹಿತಿ ನೀಡಲಿದೆ.

ABOUT THE AUTHOR

...view details