ಎಷ್ಟೋ ಬಾರಿ ಸಿನಿಮಾ ಚಿತ್ರೀಕರಣದ ವೇಳೆ ಅಪಾಯಗಳು ಸಂಭವಿಸಿರುವುದುಂಟು. ಇನ್ನು ಕಾಡಿನಲ್ಲಿ ಚಿತ್ರೀಕರಣ ಇದ್ದರೆ ಕೆಲವೊಮ್ಮೆ ಕಾಡು ಪ್ರಾಣಿಗಳಿಂದ ಕೂಡಾ ಚಿತ್ರೀಕರಣ ತಂಡ ತೊಂದರೆಗೊಳಗಾಗಿದೆ. 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರತಂಡಕ್ಕೆ ಕೂಡಾ ಇದೀಗ ಇದೇ ಪರಿಸ್ಥಿತಿ ಉಂಟಾಗಿದೆ.
ಹೆಬ್ಬಾವಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ನಾಯಕಿ ಸ್ಫೂರ್ತಿ ಉಡಿಮನೆ - ಹೆಬ್ಬಾವಿನಿಂದ ಎಸ್ಕೇಪ್ ಆದ ನಾಯಕಿ ಸ್ಫೂರ್ತಿ
ಕನ್ನಡದ ಜನಪ್ರಿಯ ಸಿನಿಮಾ ‘ಸಿಪಾಯಿ ರಾಮು’ ಚಿತ್ರದ ಗೀತೆಯಲ್ಲಿ ಬರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಾಲನ್ನು ಈ ಚಿತ್ರದ ಶೀರ್ಷಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ. ಸುದರ್ಶನ್ ಆರ್ಟ್ಸ್ ನಂದೀಶ್ ಎಂ.ಸಿ. ಗೌಡ ಮತ್ತು ಜತಿನ್ ಜಿ. ಪಟೇಲ್ ನಿರ್ಮಾಣದಲ್ಲಿ ಮೊದಲ ಹಂತದ 40 ದಿವಸಗಳ ಚಿತ್ರೀಕರಣ ಮುಗಿದಿದೆ.
ಸದ್ಯಕ್ಕೆ ಎಲ್ಲಡೆ ಚಿತ್ರೀಕರಣ ಬಂದ್ ಆಗಿದೆ. ಆದರೆ ಕೆಲವು ದಿನಗಳ ಹಿಂದೆ ಮಡಿಕೇರಿ ಹಾಗೂ ವಿರಾಜಪೇಟೆ ಸುತ್ತ ಮುತ್ತ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರೀಕರಣ ಮಾಡುತ್ತಿದ್ದ ವೇಳೆ ದೊಡ್ಡ ಗಾತ್ರದ ಹೆಬ್ಬಾವೊಂದು ನಾಯಕಿ ಸ್ಫೂರ್ತಿ ಉಡಿಮನೆ ಪಕ್ಕಕ್ಕೆ ಹರಿದುಕೊಂಡು ಬಂದಿದೆ. ಹಾವನ್ನು ನೋಡುತ್ತಿದ್ದಂತೆ ಚಿತ್ರತಂಡ ಅಲ್ಲಿಂದ ಪರಾರಿಯಾಗಿದೆ. ಆದರೆ ಅದೃಷ್ಟ ಎಂಬಂತೆ ಹೆಬ್ಬಾವು ಯಾರಿಗೂ ತೊಂದರೆ ಮಾಡದಂತೆ ಅಲ್ಲಿಂದ ಹೊರಟಿದೆ. ನಂತರ ಈ ಜಾಗ ಸರಿ ಇಲ್ಲ ಎಂದು ಹೆದರಿ ಚಿತ್ರತಂಡ ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆ.
ಕನ್ನಡದ ಜನಪ್ರಿಯ ಸಿನಿಮಾ ‘ಸಿಪಾಯಿ ರಾಮು’ ಚಿತ್ರದ ಗೀತೆಯಲ್ಲಿ ಬರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಾಲನ್ನು ಈ ಚಿತ್ರದ ಶೀರ್ಷಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ. ಸುದರ್ಶನ್ ಆರ್ಟ್ಸ್ ನಂದೀಶ್ ಎಂ.ಸಿ. ಗೌಡ ಮತ್ತು ಜತಿನ್ ಜಿ . ಪಟೇಲ್ ನಿರ್ಮಾಣದಲ್ಲಿ ಮೊದಲ ಹಂತದ 40 ದಿವಸಗಳ ಚಿತ್ರೀಕರಣ ಮುಗಿದಿದೆ. ಕಿರಣ್ ಸೂರ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡಾ ಕಿರಣ್ ಅವರದ್ದೇ. ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಈ ಚಿತ್ರದ ನಾಯಕ. ಬಾಲ ರಜವಾಡಿ, ವಿಜಯಶ್ರೀ, ಗಣೇಶ್ ನಾರಾಯಣ್, ರವಿಕುಮಾರ್, ಶೋಭನ್, ಕಿಶೋರ್, ಅಶ್ವಿನಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಗಣೇಶ್ ನಾರಾಯಣ್ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಚಿತ್ರಕ್ಕೆ ಗೌತಮ್ ಮನು ಛಾಯಾಗ್ರಹಣ, ರವಿಚಂದ್ರನ್ ಮತ್ತು ಗಣೇಶ್ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.