ಕರ್ನಾಟಕ

karnataka

ETV Bharat / sitara

ಹರಿ-ಗುರು ಜೋಡಿ, ಮಾಡಲಿದೆಯಾ ಮೋಡಿ! - ಗುರು ನಂದನ್

ಹರಿಪ್ರಿಯ ಹಾಗೂ ಫಸ್ಟ್​ ರ್ಯಾಂಕ್​ ಖ್ಯಾತಿಯ ನಟ ಗುರು ನಂದನ್ ತೆರೆಯ ಮೇಲೆ ಮೊದಲ ಬಾರಿಗೆ ಜೊತೆಯಾಗಲಿದ್ದಾರೆ. ಇವರಿಬ್ಬರ ಜೋಡಿಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ ನಿರ್ಮಾಪಕ ಜಯಣ್ಣ. ಹರಿಪ್ರಿಯಾ ಹಾಗೂ ಗುರು ನಂದನ್ ಸಿನಿಮಾಕ್ಕೆ ವಿಜಯ್ ಕಿರಣ್ ನಿರ್ದೇಶಕರಾಗಿದ್ದಾರೆ.

ಹರಿಪ್ರಿಯ

By

Published : Sep 9, 2019, 10:47 AM IST

ನೀರ್​ದೋಸೆ ಬೆಡಗಿ ಹರಿಪ್ರಿಯ ಹಾಗೂ ಫಸ್ಟ್​ ರ್ಯಾಂಕ್​ ಖ್ಯಾತಿಯ ನಟ ಗುರು ನಂದನ್ ತೆರೆಯ ಮೇಲೆ ಮೊದಲ ಬಾರಿಗೆ ಜೊತೆಯಾಗಲಿದ್ದಾರೆ. ಇವರಿಬ್ಬರ ಜೋಡಿಯನ್ನು ತೆರೆಯ ಮೇಲೆ ಒಂದಾಗಿಸಲಿದ್ದಾರೆ ನಿರ್ಮಾಪಕ ಜಯಣ್ಣ.

ಹರಿಪ್ರಿಯಾ ಈ ಹಿಂದೆ ಜಯಣ್ಣ ಕಂಬೈನ್ಸ್ ಅಡಿಯಲ್ಲಿ ‘ಬುಲ್ಲೆಟ್ ಬಸ್ಯ’ ಚಿತ್ರದಲ್ಲಿ ಅಭಿನಯಿಸಿದ್ದರು. ಸದ್ಯ ಹರಿಪ್ರಿಯಾ ಅವರು ಕನ್ನಡ ಗೊತ್ತಿಲ್ಲ, ಬಿಚ್ಚು ಗತ್ತಿ, ಕಥಾ ಸಂಗಮ, ಎಲ್ಲಿದ್ದೆ ಇಲ್ಲಿ ತನಕ ಸಿನಿಮಗಳು ವಿವಿಧ ಹಂತಗಳಲ್ಲಿವೆ. ಸದ್ಯಕ್ಕೆ ಕನ್ನಡ ಚಿತ್ರರಂಗದ ಬ್ಯುಸಿ ನಟಿ ಹರಿಪ್ರಿಯಾ ಒಂದು ತಿಂಗಳ ಪ್ರವಾಸ ಮುಗಿಸಿ ಬಂದಿದ್ದಾರೆ.

ಹರಿಪ್ರಿಯಾ ಹಾಗೂ ಗುರು ನಂದನ್ ತಾರಾಗಣದ ನಿರ್ದೇಶಕರು ವಿಜಯ್ ಕಿರಣ್. ಇವರು ‘ಸಿಂಗ’ ಸಿನಿಮಾ ನಿರ್ದೇಶನದಲ್ಲಿ ಯಶಸ್ಸು ಪಡೆದಿದ್ದರು. ಈ ಚಿತ್ರದಲ್ಲಿ ಹಾಸ್ಯ ಲೇಪನ ಮತ್ತು ರೊಮಾನ್ಸ್ ಸಹ ಇರಲಿದೆಯಂತೆ. ಹರಿಪ್ರಿಯಾ ಶ್ರೀಮಂತ ಮನೆತನದ ಹುಡುಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ನನಗೆ ಒಪ್ಪುವ ಪಾತ್ರ ಎಂದು ಸಹ ಅವರೇ ಹೇಳಿಕೊಂಡಿದ್ದಾರೆ. ಇನ್ನೂ ಶಿರ್ಷಿಕೆ ಪಕ್ಕ ಆಗಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ.

ಗುರು ನಂದನ್ ನಾಯಕ ಅಂದ ಮೇಲೆ ಅವರಿಗೆ ಪೆಟ್ ನೇಮ್​ ಆದ ‘ರಾಜು’ ಹೆಸರಿನಲ್ಲಿರಬೇಕು ಎಂಬ ಮಾತು ಕಥೆ ನಡೆಯುತ್ತಿದೆ. ಕಾರಣ ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಗುರು ನಂದನ್ ಅವರ ಹಿಂದಿನ ಸಿನಿಮಾ ‘ಮಿಸ್ಸಿಂಗ್ ಬಾಯ್’ ಅಂತಹ ಯಶಸ್ಸನ್ನು ಪಡೆಯಲಿಲ್ಲ.

ABOUT THE AUTHOR

...view details