ಕರ್ನಾಟಕ

karnataka

ETV Bharat / sitara

ಶಿವಮೊಗ್ಗದಲ್ಲಿ ಇಂದು ಗುಸ್ತಾವ್ ಮುಲ್ಲಾರ್​ ನಿರ್ದೇಶನದ 'ದಿ ಗಿಲ್ಟಿ’ ಚಿತ್ರ ಪ್ರದರ್ಶನ, ಸಂವಾದ..

ಗುಸ್ತಾವ್ ಮುಲ್ಲಾರ್​ ನಿರ್ದೇಶನದ ಡೆನ್‍ಮಾರ್ಕ್​​ನ ಡ್ಯಾನಿಷ್ ಭಾಷಾ ‘ದಿ ಗಿಲ್ಟಿ’ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಶಿವಮೊಗ್ಗದ ವಾರ್ತಾಭವನದಲ್ಲಿ ಇಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

Gustav Muller's film 'The Guilty' Conversation

By

Published : Aug 30, 2019, 11:55 AM IST

ಶಿವಮೊಗ್ಗ:ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದಿದ್ದ ಗುಸ್ತಾವ್ ಮುಲ್ಲಾರ್‌ ನಿರ್ದೇಶನದ ಡೆನ್‍ಮಾರ್ಕ್​​ನ ಡ್ಯಾನಿಷ್ ಭಾಷಾ ‘ದಿ ಗಿಲ್ಟಿ’ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಗರದ ವಾರ್ತಾಭವನದಲ್ಲಿ ಇಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ದಿ-ಗಿಲ್ಟಿ ಚಿತ್ರವು ಒಂದು ಥ್ರಿಲ್ಲರ್​ ಚಿತ್ರವಾಗಿದ್ದು, ಮಾಜಿ ಪೊಲೀಸ್ ಅಧಿಕಾರಿ ಅಸ್ಗರ್ ಎಂಬುವರ ಮನೆಯ ಟೆಲಿಫೋನ್​ಗೆ ಅಪಹರಣಕ್ಕೆ ಒಳಗಾಗಿರುವ ಮಹಿಳೆಯೊಬ್ಬರಿಂದ ಕರೆ ಬರುತ್ತದೆ. ಮಾತನಾಡುತ್ತಿರುವುವಾಗಲೇ ಸಂಪರ್ಕ ಕಡಿತಗೊಳ್ಳುತ್ತದೆ. ಬಳಿಕ ಈ ಬಗ್ಗೆ ತನಿಖೆಯನ್ನು ಅಸ್ಗರ್​ ಆರಂಭಿಸುತ್ತಾರೆ. ಬಂದ ಕರೆಯೊಂದೇ ಆಧಾರ. ಸಮಯದ ವಿರುದ್ಧ ಹೋರಾಡುತ್ತಾ, ವಿಪತ್ತಿಗೊಳಗಾದ ಮಹಿಳೆಯ ರಕ್ಷಣೆಗೆ ಅಸ್ಗರ್ ಕಾರ್ಯಪ್ರವೃತ್ತನಾಗುತ್ತಾನೆ. ತನಿಖೆ ಮುಂದುವರೆಸಿದಂತೆಲ್ಲ ಆತನಿಗೆ ಮೊದಲು ಅನಿಸಿದ್ದಕ್ಕಿಂತ ಇದು ಹೆಚ್ಚು ನಿಗೂಢವಾಗಿರುತ್ತದೆ.

ಪಾತ್ರದಾರಿಗಳು-ಜ್ಯಾಕೋಬ್, ಜೆಸ್ಸಿ ಕಾ

ಛಾಯಗ್ರಹಣ- ಜಾಸ್ಪರ್

ಸಂಗೀತ- ಕಾರ್ಲ್​

, ಅವಧಿ- 95 ನಿಮಿಷ.

ABOUT THE AUTHOR

...view details