ಕರ್ನಾಟಕ

karnataka

By

Published : Jun 20, 2019, 2:52 PM IST

ETV Bharat / sitara

ಸಿಂಪಲ್ಲಾಗಿ ಸೆಟ್ಟೇರಿತು ಭಜರಂಗಿ-2: ನಾಳೆಯಿಂದ ಶೂಟಿಂಗ್ ಶುರು

ಎ.ಹರ್ಷ ನಿರ್ದೇಶನದಲ್ಲಿ ಶಿವರಾಜ್​​ಕುಮಾರ್ ನಟಿಸುತ್ತಿರುವ 'ಭಜರಂಗಿ-2' ಚಿತ್ರದ ಮುಹೂರ್ತ ಇಂದು ಜರುಗಿದ್ದು, ನಾಳೆಯಿಂದ ಶೂಟಿಂಗ್ ಆರಂಭವಾಗಲಿದೆ. ಜಾಕಿ ಭಾವನಾ ಶಿವಣ್ಣನಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.

ಭಜರಂಗಿ-2

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರ ರಿಲೀಸ್​​​ಗೆ ರೆಡಿಯಾಗಿದೆ. ಜೊತೆಗೆ 'ಆನಂದ್', 'ದ್ರೋಣ' ಹಾಗೂ 'ಎಸ್​​​ಆರ್​​ಕೆ' ಸಿನಿಮಾಗಳ ಶೂಟಿಂಗ್​​​ನಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಇದೀಗ ಅವರ ಮತ್ತೊಂದು ಹೊಸ ಚಿತ್ರ ಸೆಟ್ಟೇರಿದೆ.

ಚಿತ್ರಕ್ಕೆ ಕ್ಲಾಪ್​ ಮಾಡುತ್ತಿರುವ ಗೀತಾ ಶಿವರಾಜ್​​​ಕುಮಾರ್

ಬ್ಯುಸಿ ಶೆಡ್ಯೂಲ್ ನಡುವೆಯೂ ಶಿವಣ್ಣ 'ಭಜರಂಗಿ-2' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇಂದು ಚಿತ್ರ ಸಿಂಪಲ್ಲಾಗಿ ಸೆಟ್ಟೇರಿದೆ. ಬೆಂಗಳೂರಿನ ಯಡಿಯೂರು ಬಳಿ ಇರುವ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿತು. ಶಿವರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​​ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಚಿತ್ರದ ಶೂಟಿಂಗ್ ನಾಳೆಯಿಂದ ಆರಂಭವಾಗಲಿದೆ.

ಭಜರಂಗಿ-2 ಮುಹೂರ್ತ

ಶಿವಣ್ಣನ‌ ಜೊತೆ ನಾಯಕಿಯಾಗಿ ಜಾಕಿ ಭಾವನಾ ನಟಿಸುತ್ತಿದ್ದಾರೆ. 'ಭಜರಂಗಿ' ಚಿತ್ರದಲ್ಲಿ ಸೂಪರ್ ಡೂಪರ್ ಹಾಡುಗಳನ್ನು ಕೊಟ್ಟಿದ್ದ ಮ್ಯೂಸಿಕ್​​ ಕಂಪೋಸರ್ ಅರ್ಜುನ್ ಜನ್ಯ ಭಜರಂಗಿ-2ಕ್ಕೂ ಸಂಗೀತ ನೀಡಲಿದ್ದಾರೆ. ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದು, ಜುಲೈ 12ರಂದು ಶಿವರಾಜ್​​​​ಕುಮಾರ್​ ಬರ್ತಡೇ ದಿನ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಹರ್ಷ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details