ಕರ್ನಾಟಕ

karnataka

ETV Bharat / sitara

ಗಣೇಶ್​ 'ಗಿಮಿಕ್' ಮೇಲೆ ಅಭಿಮಾನಿಗಳ ಬೇಸರವೇಕೆ? - ಬೇಸರ

ಟ್ರೇಲರ್​ ನೋಡಿ ಮೆಚ್ಚಿಕೊಂಡಿರುವ ಪ್ರೇಕ್ಷಕರು ಗಿಮಿಕ್ ಮೇಲೆ ಅಸಾಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಇದು ತಮಿಳಿನ 'ದಿಲ್ಲುಕ್ಕು ದುಡ್ಡು' ಚಿತ್ರದ ರಿಮೇಕ್​. 2016 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್​ ಹಿಟ್ ಆಗಿತ್ತು. ಅದನ್ನೇ ಕನ್ನಡಕ್ಕೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಚಿತ್ರಕೃಪೆ : ಟ್ವಿಟ್ಟರ್​

By

Published : May 21, 2019, 8:15 AM IST

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಿಮಿಕ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಮೊನ್ನೆಯಷ್ಟೆ ಈ ಚಿತ್ರದ ಟ್ರೇಲರ್​ ರಿಲೀಸ್ ಆಗಿ ಭಾರೀ ಸದ್ದು ಮಾಡ್ತಿದೆ.

ಕಾಮಿಡಿ ಹಾರರ್​ ಕಥಾಹಂದರದ ಗಿಮಿಕ್ ಟ್ರೇಲರ್​ ಅದ್ಭುತವಾಗಿ ಮೂಡಿ ಬಂದಿದೆ. ಬಂಗ್ಲೋವೊಂದರಲ್ಲಿ ಭೂತಗಳ ಜತೆ ನಟ ಗಣೇಶ್​​ನ ಕಾಮಿಡಿ ಟಾಕ್​ ಮಜವಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ದೆವ್ವಗಳ ಅಬ್ಬರವಿದೆ. ಆದರೆ, ಇದರೊಂದಿಗೆ ಹಾಸ್ಯದ ಹೊನಲು ಕೂಡ ಸಿಕ್ಕಾಪಟ್ಟೆಯಿದೆ. ಟ್ರೇಲರ್​​ನಲ್ಲಿ ಹಾಸ್ಯದ ಜತೆ ಹಾರರ್​​ ತುಂಬಿರುವ ಚಿತ್ರತಂಡ, ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ನಗಿಸುವುದು ನೋ ಡೌಟ್​​. ಗಿಮಿಕ್ ನಟ ಗಣೇಶ್​ ಅವರ ಮೊದಲ ಹಾರರ್​ ಮೂವಿ.

ಇನ್ನು ಟ್ರೇಲರ್​ ನೋಡಿ ಮೆಚ್ಚಿಕೊಂಡಿರುವ ಪ್ರೇಕ್ಷಕರು ಗಿಮಿಕ್ ಮೇಲೆ ಅಸಾಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಇದು ತಮಿಳಿನ 'ದಿಲ್ಲುಕ್ಕು ದುಡ್ಡು' ಚಿತ್ರದ ರಿಮೇಕ್​. 2016 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್​ ಹಿಟ್ ಆಗಿತ್ತು. ಅದನ್ನೇ ಕನ್ನಡಕ್ಕೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ರಿಲೀಸ್ ಆಗಿರುವ ಗಿಮಿಕ್ ಟ್ರೇಲರ್​ ಹಾಗೂ 'ದಿಲ್ಲುಕ್ಕು ದುಡ್ಡು' ಚಿತ್ರದ ಟ್ರೇಲರ್​​ನಲ್ಲಿ ಸಾಕಷ್ಟು ಸಾಮತ್ಯ ಇದೆ. ಇದನ್ನೇ ಪ್ರಶ್ನಿಸುತ್ತಿರುವ ನೆಟ್ಟಿಗರು, ರಿಮೇಕ್ ಚಿತ್ರ ಯಾಕೆ ಮಾಡ್ತೀರಾ ? ಕನ್ನಡದಲ್ಲಿ ಒಳ್ಳೆ ಪ್ರತಿಭೆಗಳಿವೆ. ಈ ರೀತಿ ರಿಮೇಕ್ ಚಿತ್ರಗಳಿಂದ ಕನ್ನಡ ಚಿತ್ರೋದ್ಯಮ ಬೆಳೆಯಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಚಿತ್ರಕೃಪೆ : ಯುಟ್ಯೂಬ್​ ​
ಚಿತ್ರಕೃಪೆ : ಯುಟ್ಯೂಬ್​ ​
ಚಿತ್ರಕೃಪೆ : ಯುಟ್ಯೂಬ್​ ​
ಚಿತ್ರಕೃಪೆ : ಯುಟ್ಯೂಬ್​ ​

ಇನ್ನು ಕೆಲವರು ಇದು ತಮಿಳು ರಿಮೇಕ್ ಆಗಿದ್ದರು ಕೂಡ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

ಚಿತ್ರಕೃಪೆ : ಯುಟ್ಯೂಬ್​ ​
ಕೆಲ ದಿನಗಳ ಹಿಂದೆಯಷ್ಟೆ ತಮಿಳಿನ 96 ಚಿತ್ರ ಕನ್ನಡಕ್ಕೆ 99 ಹೆಸರಿನಲ್ಲಿ ರಿಮೇಕ್ ಆಗಿ ತೆರೆ ಕಂಡಿತ್ತು. ಪ್ರೀತಂ ಗುಬ್ಬಿ ನಿರ್ದೇಶನದ 99ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟಿ ಭಾವನಾ ನಟಿಸಿದ್ದರು. ಈ ಚಿತ್ರ ಹೇಳಿಕೊಳ್ಳುವಷ್ಟು ಗೆಲುವು ತಂದು ಕೊಡಲಿಲ್ಲ ಎನ್ನುವ ಮಾತಿದೆ. ಇದೀಗ ಮತ್ತೊಮ್ಮೆ ತಮಿಳು ಚಿತ್ರದ ರಿಮೇಕ್​ಗೆ ಮೊರೆ ಹೋಗಿದ್ದು, ಈ ಚಿತ್ರವಾದರೂ ಗಣೇಶ್​ಗೆ ಕೈ ಹಿಡಿಯುತ್ತಾ ಎಂಬುದು ಗಾಂಧಿ ನಗರ ಜನತೆಯ ಪ್ರಶ್ನೆ.

ABOUT THE AUTHOR

...view details