ಟೈಟಲ್ನಿಂದಲೇ ತುಂಬಾ ನಿರೀಕ್ಷೆ ಹುಟ್ಟುಹಾಕಿದ್ದ, ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ, ಯುವ ನಿರ್ದೇಶಕ ನಂದೀಶ್ ನಿರ್ದೇಶನದ 'ಗೋದ್ರಾ' ಚಿತ್ರದ ಟೀಸರ್ ಲಾಂಚ್ ಆಗಿದೆ. ಈ ಮೂಲಕ ಚಿತ್ರ ತಂಡ ಹೊಸ ರಕ್ತಸಿಕ್ತ ಕಥೆಯ ಅಧ್ಯಾಯ ಬರೆಯೋಕೆ ರೆಡಿಯಾಗಿದೆ.
'ಗೋದ್ರಾ' ಟೀಸರ್ ಔಟ್ : ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ ಸತೀಶ್ - ನೀನಾಸಂ ಸತೀಶ್
ನೀನಾಸಂ ಸತೀಶ್ ಅಭಿನಯದ ಗೋದ್ರಾ ಟೀಸರ್ ರಿಲೀಸ್ ಆಗಿದೆ. ಟೀಸರ್ನಲ್ಲಿ ಅಭಿನಯ ಚತುರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದು, ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆ.
ಚಿತ್ರದ ಟೀಸರ್ ಸಿನಿ ಪ್ರಿಯರ ನಿರೀಕ್ಷೆ ಹುಸಿ ಮಾಡದೇ ಅಂದುಕೊಂಡಂತೆ ಕುತೂಹಲ ತಣಿಸಿದೆ. ಹುಟ್ಟು ದರಿದ್ರವಾಗಿದ್ರು ಸಾವು ಚರಿತ್ರೆ ಆಗಿರಲೇಬೇಕು ಎನ್ನುವ ಸತೀಶ್ ಡೈಲಾಗ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಚಂಬಲ್ ಚಿತ್ರದಲ್ಲಿ ಖಡಕ್ ಐಎಎಸ್ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದಿದ್ದ ಸತೀಶ್ ಈ ಚಿತ್ರದಲ್ಲಿ ಗನ್ ಹಿಡಿದು ಹೋರಾಟಕ್ಕಿಳಿದಿದ್ದಾರೆ.
ಚಿತ್ರದಲ್ಲಿ ಶೋಷಣೆಯ ವಿರುದ್ಧ ಸಿಡಿದು ನಿಲ್ಲುವ ಯುವಕನ ಪಾತ್ರದಲ್ಲಿ ಸತೀಶ್ ಕಾಣಿಸಿದ್ದು, ಟೀಸರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟಾಗಿದೆ ಎನ್ನಬಹುದು. ಇನ್ನು ಈ ಚಿತ್ರದಲ್ಲಿ ಸತೀಶ್ ಜೋಡಿಯಾಗಿ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ. ಇದಲ್ಲದೇ ಅಚ್ಯುತ್ ರಾವ್, ವಸಿಷ್ಠ ಸಿಂಹ ಹಾಗೂ ಬಿಗ್ ಬಾಸ್ ಖ್ಯಾತಿಯ ರಕ್ಷಾ ಸೋಮಶೇಖರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಜೇಕಬ್ ವರ್ಗೀಸ್ ಬಂಡವಾಳ ಹಾಕಿದ್ದಾರೆ