ಕನ್ನಡ ಚಿತ್ರರಂಗದ ಹಿಟ್ ಕಾಂಬಿನೇಷನ್ನಲ್ಲಿ ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಸಹ ಒಂದು. ಮುಂಗಾರುಮಳೆಯಿಂದ ಪ್ರಾರಂಭವಾದ ಈ ಜೋಡಿಯ ಯಶಸ್ಸು, ಗಾಳಿಪಟದಲ್ಲಿ ಮತ್ತಷ್ಟು ಉತ್ತುಂಗಕ್ಕೇರಿತು. ಆ ನಂತರ ಬಿಡುಗಡೆಯಾದ ಮುಗುಳು ನಗೆ ಬಾಕ್ಸ್ ಆಫೀಸ್ನಲ್ಲಿ ಅಷ್ಟು ಸುದ್ದಿಯಾಗದಿದ್ದರೂ, ಟಿವಿಯಲ್ಲಿ ಬಿಡುಗಡೆಯಾದ ಮೇಲೆ ಜನಪ್ರಿಯವಾಗಿದೆ. ಇದೀಗ ಅವರಿಬ್ಬರೂ ಗಾಳಿಪಟ- 2 ಚಿತ್ರ ಮಾಡುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ.
'ಈ ಚಿತ್ರವು ನನ್ನ ಹಾಗೂ ಯೋಗರಾಜ್ ಭಟ್ ಅವರ ಬೆಸ್ಟ್ ಚಿತ್ರ ಆಗಲಿದೆ' ಎಂದು ಭವಿಷ್ಯ ನುಡಿಯುತ್ತಾರೆ ಗಣೇಶ್. ಇದುವರೆಗೂ ನಾಲ್ಕು ಚಿತ್ರಗಳನ್ನು ಮಾಡಿದ್ದೇವೆ. ಈ ಪೈಕಿ ಮೂರು ಚಿತ್ರಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರ ಬೆಸ್ಟ್ ಚಿತ್ರವಾಗಲಿದೆ ಎಂಬುದು ನನ್ನ ನಂಬಿಕೆ. ಅಷ್ಟು ಚೆನ್ನಾಗಿ ಮಾಡಿದ್ದಾರೆ ಭಟ್ಟರು ಅಂತಾರೆ ಗೋಲ್ಡನ್ ಸ್ಟಾರ್.