ಕರ್ನಾಟಕ

karnataka

ETV Bharat / sitara

ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪ್ರಿಯಾಂಕ ಉಪೇಂದ್ರ - ಪ್ರಿಯಾಂಕ ಉಪೇಂದ್ರ

ಪ್ರಿಯಾಂಕ ಉಪೇಂದ್ರ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ‘ಸೈಂಟ್ ಮಾರ್ಕ್ಸ್ ರಸ್ತೆ’ ಎಂಬ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಿಯಾಂಕ ದ್ವಿಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

first time priyanka upendra play in double role
ಪ್ರಿಯಾಂಕ ಉಪೇಂದ್ರ

By

Published : Dec 4, 2019, 9:28 AM IST

ಜನಪ್ರಿಯ ನಟಿ, ರಿಯಲ್​​ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಬೆಂಗಳೂರು ಮಹಾನಗರದ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದ ಒಂದು ಘಟನೆ ಆಧರಿಸಿ ಕನ್ನಡದಲ್ಲಿ ‘ಸೈಂಟ್ ಮಾರ್ಕ್ಸ್ ರಸ್ತೆ’ ಎಂಬ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಿಯಾಂಕ ದ್ವಿಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಪ್ರಿಯಾಂಕ ಉಪೇಂದ್ರ

ನಿಜ ಜೀವನದ ಆಧಾರದ ಮೇಲೆ ಸಿದ್ದವಾಗುತ್ತಿರುವ ಈ ಸಿನಿಮಾ ಕನ್ನಡ ಅಷ್ಟೇ ಅಲ್ಲದೆ ತಮಿಳಿನಲ್ಲಿಯೂ ತಯಾರಾಗುತ್ತಿದೆ. ಅಂದ ಹಾಗೆ ಪ್ರಿಯಾಂಕ ಉಪೇಂದ್ರ ಬಹಳ ವರ್ಷಗಳ ನಂತರ ತಮಿಳು ಭಾಷೆಗೆ ಮತ್ತೆ ವಾಪಸಾಗುತ್ತಿದ್ದಾರೆ. ಇನ್ನು ಪ್ರಿಯಾಂಕ ಉಪೇಂದ್ರ ಈ ಹಿಂದೆ ತೆಲುಗು, ಬಂಗಾಳಿ, ಹಿಂದಿ ಭಾಷೆಗಳಲ್ಲೂ ನಟಿಸಿದ್ದರು.

ಪ್ರಿಯಾಂಕ ಮತ್ತು ಉಪೇಂದ್ರ

ಯುವ ನಿರ್ದೇಶಕರಾದ ಮಗೇಶ್ ಹಾಗೂ ವೆಂಕಟೇಶ್, ಮ್ಯಾಗ್ವನ್ ಹೆಸರಿನಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕಥೆಯಲ್ಲಿ ಡೆಲ್ಸಿ ಹಾಗೂ ವೇರಾ ಎಂಬ ಎರಡು ಕ್ರಿಶ್ಚಿಯನ್​ ಪಾತ್ರಗಳು ಇರುವುದರಿಂದ ಪ್ರಿಯಾಂಕ ಆಂಗ್ಲ ಭಾಷೆಯಲ್ಲಿ ಹೆಚ್ಚು ಸಂಭಾಷಣೆ ಮಾಡಲಿದ್ದಾರಂತೆ.

ಪ್ರಿಯಾಂಕ ಉಪೇಂದ್ರ

ಈಗಾಗಲೇ ಪ್ರಿಯಾಂಕ ಜನುಮ ದಿನವಾದ ನವೆಂಬರ್​ 12ರಂದು ‘ಸೈಂಟ್ ಮಾರ್ಕ್ಸ್ ರಸ್ತೆ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಇನ್ನು ಸಿನಿಮಾದಲ್ಲಿ ತಮಿಳು ನಟರಾದ ಮೇಹತ್ ರಾಘವೇಂದ್ರ, ಯಶಿಕ ಆನಂದ್, ಸಾರಾ ವೆಂಕಟೇಶ್, ಮನೋಬಲಾ ಸಹ ನಟಿಸಲಿದ್ದಾರಂತೆ.

ABOUT THE AUTHOR

...view details