ಕರ್ನಾಟಕ

karnataka

ETV Bharat / sitara

ರಿಯಲ್ ಸ್ಟಾರ್​ @51... ಹುಟ್ಟುಹಬ್ಬಕ್ಕೆ ರೆಡಿಯಾಯ್ತು 51 ಕೆ.ಜಿ ಕೇಕ್! - ಉಪೇಂದ್ರ ಹುಟ್ಟುಹಬ್ಬ

ಇಂದು ಸ್ಯಾಂಡಲ್​ವುಡ್​​ ರಿಯಲ್ ಸ್ಟಾರ್ ಉಪೇಂದ್ರ 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಉಪೇಂದ್ರ ಹುಟ್ಟುಹಬ್ಬ

By

Published : Sep 18, 2019, 6:27 AM IST

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ ತರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ರು. ಅಲ್ಲದೆ ಕೇಕ್ ಹಾರದ ಬದಲು ಗಿಡಗಳನ್ನ ಗಿಫ್ಟ್ ಕೊಡಲು ಉಪ್ಪಿ ಫ್ಯಾನ್ಸ್ ಗಳಿಗೆ ಹೇಳಿದ್ರು. ಆದರೆ ಉಪ್ಪಿಗೆ ಬರ್ತ್ ಡೇಗೆ ಬೆಳಂದೂರಿನ‌ ಕೆಲ ಅಭಿಮಾನಿಗಳು ಸೇರಿ ಬರೋಬ್ಬರಿ 51 ಕೆಜಿ ಕೇಕ್ ತಯಾರಿಸಿದ್ದಾರೆ.

ಉಪೇಂದ್ರ ಹುಟ್ಟುಹಬ್ಬಕ್ಕೆ 51 ಕೆ.ಜಿ ಕೇಕ್

ಕೇಕ್ ಮೇಲೆ ಉಪ್ಪಿ ಮತ್ತು ಪ್ರಿಯಾಂಕ ಫೋಟೋ ಇದೆ, ಇಂದು ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿಸಲು ಬುದ್ದಿವಂತನ ಫ್ಯಾನ್ಸ್​ ರೆಡಿಯಾಗಿದ್ದಾರೆ. ಅಲ್ಲದೆ ನಿನ್ನೆಯೇ ಬೆಂಗಳೂರಿನ ಕತ್ರಿಗುಪ್ಪೆಯ ಉಪ್ಪಿ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ್ದಾರೆ. ನಿವಾಸದ ಬಳಿ ಬಂದಿದ್ದ ಅಭಿಮಾನಿಗಳ ಜೊತೆ ಉಪ್ಪಿ ಕೆಲ ಸಮಯ ಕಳೆದು, ಅಭಿಮಾನಿಗಳ ಜೊತೆ ಪೋಟೋಗೆ ಪೋಸ್ ನೀಡಿದ್ದಾರೆ.

ಉಪೇಂದ್ರ ಹುಟ್ಟುಹಬ್ಬಕ್ಕೆ 51 ಕೆ.ಜಿ ಕೇಕ್

ಕೆಲ ಅಭಿಮಾನಿಗಳು ಉಪ್ಪಿ ಮಾತಿಗೆ ಬೆಲೆಕೊಟ್ಟು ಗಿಡಗಳನ್ನು ತಂದಿದ್ದು, ಪ್ರೀತಿಯಿಂದ ಉಪ್ಪಿಗೆ ಉಡುಗೊರೆಯಾಗಿ ನೀಡಿದ್ದಾರೆ.

ABOUT THE AUTHOR

...view details