ಕರ್ನಾಟಕ

karnataka

By

Published : May 19, 2019, 7:42 PM IST

ETV Bharat / sitara

'ಅಮರ್' ರಿಲೀಸ್​​​​​ಗೂ ಮುನ್ನವೇ ಶುರುವಾಯ್ತು ಜ್ಯೂ. ಜಲೀಲನ ಹವಾ

ಮೇ 31 ರಂದು ಅಭಿಷೇಕ್ ಅಂಬರೀಶ್ ನಟನೆಯ 'ಅಮರ್​​​' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಸ್ಯಾಂಡಲ್​​ವುಡ್​​​ನಲ್ಲಿ ಸಂಭ್ರಮ ಜೋರಾಗಿದೆ. ಸಿನಿಮಾವನ್ನು ಅಭಿಮಾನಿಗಳು ಗ್ಯ್ರಾಂಡ್ ಆಗಿ ಸ್ವಾಗತಿಸುತ್ತಿದ್ದಾರೆ.

'ಅಮರ್'

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಟಿಸಿರುವ ಮೊದಲ ಸಿನಿಮಾ 'ಅಮರ್​​' ಇದೇ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಗಾಂಧಿನಗರದಲ್ಲಿ ಸಂಭ್ರಮ ಜೋರಾಗಿದೆ.

ಪೋಸ್ಟರ್ ಮುಂದೆ ಅಭಿಮಾನಿಗಳ ಸಂಭ್ರಮ

'ಅಮರ್​' ಬಿಡುಗಡೆಗೆ ಇನ್ನೂ ಎರಡು ವಾರ ಬಾಕಿ ಇರುವಾಗಲೇ ನರ್ತಕಿ ಥಿಯೇಟರ್​ ಮುಂದೆ ಅಭಿಷೇಕ್ ಅಂಬರೀಶ್ ಕಟೌಟ್ ತಲೆಯತ್ತಿದೆ. ಅಭಿಮಾನಿಗಳು ಸುಮಾರು 30-50 ಅಡಿ ಕಟೌಟ್​​​​ ಸಿದ್ಧಗೊಳಿಸಿ ಸಂಭ್ರಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಪೋಸ್ಟರ್​​​​​​​​​​​​​ಗಳಲ್ಲಿ ಅಭಿಷೇಕ್ ವಿವಿಧ ಭಂಗಿಯಲ್ಲಿ ನಿಂತಿರುವ ಫೋಟೊಗಳೊಂದಿಗೆ ಅಂಬರೀಶ್, ಸುಮಲತಾ ಅಂಬರೀಶ್​​​, ದರ್ಶನ್, ಯಶ್ ಫೋಟೊಗಳನ್ನು ಸೇರಿಸಿ ಅದಕ್ಕೆ ಹೂವು ಹಾಕಿ, ಹಾಲಿನ ಅಭಿಷೇಕ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆರತಿ ಎತ್ತಿ ಸಂಭ್ರಮಿಸಿದ್ದಾರೆ.

ಒಟ್ಟಿನಲ್ಲಿ 'ಅಮರ್​' ಚಿತ್ರವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ವೆಲ್​​​ಕಮ್ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಮೇ 29 ಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವಾಗಿದ್ದು 'ಅಮರ್​​' ಸಿನಿಮಾ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಎಂದೇ ಹೇಳಬಹುದು. ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದರೆ, ನಾಗಶೇಖರ್ ನಿರ್ದೇಶಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details