ಇಹ ಲೋಕದ ಪ್ರಯಾಣ ಮುಗಿಸಿ ಬಾರದ ಲೋಕಕ್ಕೆ ನಡೆದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾಗೆ ಸಲಗ ಚಿತ್ರತಂಡ ಅಂತಿಮ ನಮನ ಸಲ್ಲಿಸಿದೆ. ಚಿರು ಭಾವಚಿತ್ರಕ್ಕೆ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಹೂ ಮಾಲೆ ಹಾಕಿ ಒಂದು ನಿಮಿಷ ಮೌನಾಚರಣೆ ಮಾಡಿದರು.
ಅಂತಿಮ ನಮನ ಸಲ್ಲಿಸಿ ಮಾತನಾಡಿದ ದುನಿಯಾ ವಿಜಯ್ ಚಿರಂಜೀವಿಯದು ಸಾಯುವ ವಯಸ್ಸಲ್ಲ. ಚಿಕ್ಕ ವಯಸ್ಸಿನಲ್ಲಿ ಹೀಗಾಗಿರೋದನ್ನು ಮರೆಯೋಕೆ ಆಗಲ್ಲ. ಮನಸ್ಸಿಗೆ ತುಂಬಾ ಸಂಕಟ ಆಗುತ್ತೆ ಎಂದು ಚಿರಂಜೀವಿ ಅಕಾಲಿಕ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ರು.
ಚಿರು ಸಾವಿಗೆ ಕಂಬನಿ ಮಿಡಿದ ದುನಿಯಾ ವಿಜಿ ಮತ್ತು ಡಾಲಿ ನಂತರ ಮಾತನಾಡಿದ ಡಾಲಿ ಧನಂಜಯ್ ಚಿರು ಸಾವಿನ ವಿಷಯ ತುಂಬಾ ನೋವಾಗುವಂತಹದ್ದು. ಮೇಘನಾ ಹಾಗು ಕುಟುಂಬದವರ ನೋವು ಹೇಳೋಕಾಗಲ್ಲ. ಆ ದೇವರು ಚಿರು ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ. ಚಿರು ಈ ವಯಸ್ಸಿನಲ್ಲಿ ಹೋಗಿರೋದನ್ನು ಅರಗಿಸಿಕೊಳ್ಳಲು ಆಗಲ್ಲ. ನನಗೆ ಈಗಲೂ ಅದನ್ನ ನಂಬೋಕೆ ಆಗ್ತಿಲ್ಲ.
ಚಿರು ಇಲ್ಲೇ ಎಲ್ಲೋ ಹೋಗಿದ್ದಾನೆ, ಬರ್ತಾನೆ ಅನ್ನಿಸ್ತಿದೆ. ಇಂತ ನೋವು ಬೇರೆ ಯಾರಿಗೂ ಬೇಡ ಎಂದು ಡಾಲಿ ಚಿರು ಸಾವಿಗೆ ಬೇಸರ ವ್ಯಕ್ತಪಡಿಸಿದ್ರು.