ಕರ್ನಾಟಕ

karnataka

ETV Bharat / sitara

ಅಭಿಮಾನಿ ದೇವರ ದೇವಾಲಯವಾದ ಡಾ.ರಾಜ್​​​ಕುಮಾರ್ ಸ್ಮಾರಕ

ಅಣ್ಣಾವ್ರ ಸಮಾಧಿಯನ್ನು ಬೆಲೆ ಬಾಳುವ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿ ವಿಶಾಲವಾದ ಉದ್ಯಾನ, ರಂಗಮಂದಿರ ಇದೆ. ಸಮಾಧಿ ಬಳಿ ತೆರಳುವ ಮುನ್ನ, ಕಂಚಿನಿಂದ ಕೂಡಿರುವ ಡಾ. ರಾಜ್​​​​​​​​​​​​​​​​​​​​​​​​​​​​​​​​​ಕುಮಾರ್ ಪುತ್ಥಳಿ ಎಲ್ಲರನ್ನು ಸೆಳೆಯುತ್ತದೆ.

Dr. Raj Kumar Memorial
ಡಾ. ರಾಜ್​​​ಕುಮಾರ್ ಸ್ಮಾರಕ

By

Published : Dec 13, 2019, 8:01 PM IST

ತಮ್ಮ ಅಮೋಘ ಅಭಿನಯದ ಮೂಲಕ ಜನಮಾನಸದಲ್ಲಿ ಇಂದಿಗೂ, ಎಂದೆಂದಿಗೂ ಉಳಿದಿರುವ ನಟಸಾರ್ವಭೌಮ ಡಾ. ರಾಜ್​​​​​ಕುಮಾರ್ ನಮ್ಮನ್ನೆಲ್ಲಾ ಅಗಲಿ 14 ವರ್ಷಗಳು ತುಂಬಿವೆ. ರಂಗಭೂಮಿ ಹಿನ್ನೆಲೆಯಿಂದ ಬಂದು ಸಿನಿಮಾರಂಗಲ್ಲಿ ಧ್ರುವತಾರೆಯಾಗಿ ಉಳಿದಿದ್ದಾರೆ ನಮ್ಮ ನಿಮ್ಮೆಲ್ಲರ ನಟಸಾರ್ವಭೌಮ.

ಡಾ. ರಾಜ್​​​ಕುಮಾರ್ ಸಮಾಧಿ ಈಗ ಪ್ರವಾಸಿ ತಾಣ

ಈ ದೇವತಾ ಮನುಷ್ಯನ ನಟನೆ, ಸರಳತೆ , ಸಿನಿಮಾ ಸೇವೆ ಗುರುತಿಸಿ, ಅಂದಿನ ರಾಜ್ಯ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರ ಸಮಾಧಿಯನ್ನು ಸ್ಥಾಪಿಸಿತು. ಸುಮಾರು ಎರಡೂವರೆ ಎಕರೆಯಲ್ಲಿ ನಿರ್ಮಾಣವಾಗಿರುವ ಈ ಸಮಾಧಿ ಸ್ಥಳ ಇದೀಗ ದೇವಾಲಯವಾಗಿದೆ. ಅಣ್ಣಾವ್ರ ಸಮಾಧಿಯನ್ನು ಬೆಲೆ ಬಾಳುವ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿ ವಿಶಾಲವಾದ ಉದ್ಯಾನ, ರಂಗಮಂದಿರ ಇದೆ. ಸಮಾಧಿ ಬಳಿ ತೆರಳುವ ಮುನ್ನ, ಕಂಚಿನಿಂದ ಕೂಡಿರುವ ಡಾ. ರಾಜ್​​​​​​​​​​​​​​​​​​​​​​​​​​ಕುಮಾರ್ ಪುತ್ಥಳಿ ಎಲ್ಲರನ್ನು ಸೆಳೆಯುತ್ತದೆ. ಈ ಸ್ಥಳ ಈಗ ಅಭಿಮಾನಿಗಳ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ಟೂರಿಸ್ಟ್ ಸ್ಪಾಟ್ ಆಗಿದೆ.

ಪ್ರತಿದಿನ ಒಂದು ಸಾವಿರ ಜನರು ಅಣ್ಣಾವ್ರ ಸಮಾಧಿ ಬಳಿ ಬಂದುಹೋಗುತ್ತಾರೆ. ಈ ಸಂಖ್ಯೆ ವಾರದ ಕೊನೆಯ ದಿನಗಳಲ್ಲಿ ಇನ್ನೂ ಹೆಚ್ಚುತ್ತದೆ. ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆವರೆಗೂ ಇಲ್ಲಿಗೆ ಭೇಟಿ ನೀಡುವ ಅವಕಾಶವಿದೆ. ಅಣ್ಣಾವ್ರ ಸಮಾಧಿ ನೈಸ್ ರಸ್ತೆಯ ಪಕ್ಕದಲ್ಲೇ ಇದೆ. ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಕೂಡಾ ಹತ್ತಿರವಿದ್ದು ಇಲ್ಲಿಂದ ಸುಮಾರು 9 ಕಿ.ಮೀ ದೂರವಿದೆ. ಏರ್​​ಪೋರ್ಟಿನಿಂದ ಸುಮಾರು 37 ಕಿ.ಮೀ ಇದ್ದು ಒಂದು ಗಂಟೆ ಜರ್ನಿ ಆಗುತ್ತದೆ. ಈ ಸ್ಮಾರಕ ನೋಡಲು ಯಾವುದೇ ಶುಲ್ಕ ಇಲ್ಲ. ಅಣ್ಣಾವ್ರ ಸ್ಮಾರಕ ಅಭಿಮಾನಿಗಳು ಹಾಗೂ ಪ್ರವಾಸಿಗರ ಹಾಟ್ ಫೇವರೆಟ್ ಸ್ಥಳವಾಗಿರುವುದಂತೂ ನಿಜ.

ABOUT THE AUTHOR

...view details