ಕರ್ನಾಟಕ

karnataka

ETV Bharat / sitara

ಬಡವ ರಾಸ್ಕಲ್​​ ಚಿತ್ರೀಕರಣ ಅಂತ್ಯ: ಸಿನಿ ಕಾರ್ಮಿಕರಿಗೆ ಉಡುಗೊರೆ ನೀಡಿದ ಡಾಲಿ - badava rascal movie

ಡಾಲಿ ಧನಂಜಯ್ ಬಡವ ರಾಸ್ಕಲ್​​​ ಚಿತ್ರಕ್ಕಾಗಿ ದುಡಿದವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ನಟನೆ ಜೊತೆಗೆ ಬಡವ ರಾಸ್ಕಲ್ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್ ಈ ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನ ಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿದ್ದಾರೆ.

Dolly gift to cine workers
ಸಿನಿ ಕಾರ್ಮಿಕರಿಗೆ ಉಡುಗೊರೆ ನೀಡಿದ ಡಾಲಿ

By

Published : Oct 14, 2020, 1:14 PM IST

ಬಡವ ರಾಸ್ಕಲ್ ಚಿತ್ರ ಸ್ಯಾಂಡಲ್​​​ವುಡ್​ನಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ಅಭಿನಯದ ಜೊತೆಗೆ ಮೊಟ್ಟ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಚಿತ್ರ. ಪೋಸ್ಟರ್​​ನಿಂದ ಗಮನ‌ ಸೆಳೆದಿದ್ದ ಬಡವ ರಾಸ್ಕಲ್ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ.

ಸಹಜವಾಗಿ ಸಿನಿಮಾ ಚಿತ್ರೀಕರಣದ ಮುಕ್ತಾಯದ ಸಂದರ್ಭದಲ್ಲಿ ಚಿತ್ರತಂಡ ತಮ್ಮ ಪ್ರತಿಯೊಬ್ಬ ಕಾರ್ಮಿಕರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡುತ್ತಾರೆ‌. ಆದರೆ, ಡಾಲಿ ಧನಂಜಯ್ ಈ ಚಿತ್ರಕ್ಕಾಗಿ ದುಡಿದವರಿಗೆ ವಿಶೇಷ ಉಡುಗೊರೆಯನ್ನ ನೀಡಿದ್ದಾರೆ. ನಟನೆ ಜೊತೆಗೆ ಬಡವ ರಾಸ್ಕಲ್ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್ ಈ ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನ ಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿದ್ದಾರೆ.

ಸಿನಿ ಕಾರ್ಮಿಕರಿಗೆ ಉಡುಗೊರೆ ನೀಡಿದ ಡಾಲಿ

ಬೆಂಗಳೂರು, ಮೈಸೂರು ಹಾಗೂ ಪಾಂಡವಪುರದಲ್ಲಿ ಈ ಚಿತ್ರವನ್ನ ಶೂಟಿಂಗ್ ಮಾಡಲಾಗಿದೆ. ಇನ್ನು ಡಾಲಿ ಧನಂಜಯ ಜೋಡಿಯಾಗಿ ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಇವ್ರ ಜೊತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ನಟಿಸಿದ್ದಾರೆ.

ಬಡವ ರಾಸ್ಕಲ್​​ ಪೋಸ್ಟರ್​​

ಮಧ್ಯಮ ವರ್ಗದ ಜನರ ನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾಹಂದರ. ಈ ಚಿತ್ರಕ್ಕೆ ಶಂಕರ್ ಗುರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಶಂಕರ್ ಗುರು ಅವರೇ ಬರೆದಿದ್ದಾರೆ.

ABOUT THE AUTHOR

...view details